ಅರಣ್ಯ ಭೂಮಿ ಒತ್ತುವರಿ ರೈತರಿಗೆ ಸೂಚನೆ
ಭದ್ರಾವತಿ: ಕೇಂದ್ರ ಸರ್ಕಾರದ ಅರಣ್ಯ ಹಕ್ಕು ಸಮಿತಿಯನ್ನು ಆಯಾ ಗ್ರಾಮದಲ್ಲಿ ರಚಿಸಿದ್ದು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ರೈತರು ಜೂ.30 ರೊಳಗಾಗಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಿಂದ ನಿಗದಿತ ಫಾರಂ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸಬೇಕೆಂದು ಕಾಂಗ್ರೆಸ್ ಕಿಸಾನ್ ಮತ್ತು ಕೃಷಿ ಕಾರ್ಮಿಕರ ವಿಭಾಗ ಮನವಿ ಮಾಡಿದೆ.
ಅದೇ ರೀತಿ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ಜಾಗ ಮಂಜೂರು ಮಾಡಲು ಶಾಸನವನ್ನು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಈ ಹಿಂದೆ ಮಾಡಿದೆ. ಪಂಚಾಯ್ತಿಯಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಮನೆಯ ಭಾವಚಿತ್ರ, ಗುರುತಿನ ಚೀಟಿ ಮತ್ತು ವಾಸವಾಗಿರುವುದಕ್ಕೆ ಪಂಚಾಯ್ತಿ ನೀಡಿದ ದೃಢೀಕರಣ ಪತ್ರದೊಂದಿಗೆ ಸಲ್ಲಿಸಬೇಕೆಂದು ಸಹ ವಿಭಾಗ ಮನವಿ ಮಾಡಿದೆ. ಸರ್ಕಾರಿ ಭೂಮಿಯಲ್ಲಿ (ಕಂದಾಯ) ಮನೆ ಕಟ್ಟಿಕೊಂಡಿರುವ ಒತ್ತುವರಿದಾರರು ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಖಾತೆ ಮಾಡಿಸಿಕೊಳ್ಳಬೇಕಾಗಿ ಸಹ ಮನವಿಯಲ್ಲಿ ವಿಭಾಗದ ಅಧ್ಯಕ್ಷ ಎಚ್.ಎಸ್. ಶಂಕರರಾವ್ ಮತ್ತು ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಸಿಂಗ್ ತಿಳಿಸಿದ್ದಾರೆ.