ಶಿರಾಳಕೊಪ್ಪದಲ್ಲಿ ಮಲೇರಿಯಾ ಜಾಗೃತಿಗಾಗಿ ಜಾಥಾ
ಶಿರಾಳಕೊಪ್ಪ: ಚಿಕ್ಕ ಕಡಿತ-ದೊಡ್ಡ ಆಘಾತ, ಶೀಘ್ರಪತ್ತೆ-ಸಂಪೂರ್ಣ ಚಿಕಿತ್ಸೆ ಎಂಬ ಘೋಷಣೆಯೊಂದಿಗೆ ತಾಲೂಕು ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಹಾಗೂ ಸಾರ್ವಜನಿಕರಿಗೆ ಮಲೇರಿಯಾ ಮತ್ತು ಇತರ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಜಾಥಾ ನಡೆಯಿತು.
ಪಟ್ಟಣ ಪಂಚಾಯ್ತಿ ಸಭಾ ಭವನದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಶಿರಾಳಕೊಪ್ಪ ಪಪಂ ಕಚೇರಿ ಹಾಗೂ ಸಪಪೂ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ತಾಲೂಕು ವೈದ್ಯಾಧಿಕಾರಿ ನಾಗರಾಜ್ ನಾಯ್ಕ್, ಜಿಲ್ಲಾ ಕೀಟ ತಜ್ಞ ಶ್ರೀಕಾಂತ ಪಾಟೀಲ್ ಮಾತನಾಡಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ದಾನೇರ್, ತಾಪಂ ಉಪಾಧ್ಯಕ್ಷೆ ಸರೋಜಮ್ಮ ಮಾತನಾಡಿದರು.
ತಾಪಂ ಅಧ್ಯಕ್ಷೆ ಲೀಲಾವತಿ ಉದ್ಘಾಟಿಸಿದರು. ಪಪಂ ಅಧ್ಯಕ್ಷೆ ಜಮೀಲಾ ಖಾತೂನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಪಪಂ ಮಾಜಿ ಅಧ್ಯಕ್ಷ ಚಂದ್ರಶೇಖರ, ಪಪಂ ಸದಸ್ಯರು, ವೈದ್ಯಾಧಿಕಾರಿಗಳು ಹಾಗು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.