ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾನವೀಯ ಮೌಲ್ಯವೇ ಆಸ್ಕರ್ ಪ್ರಶಸ್ತಿಯ ಗರಿ

Lingaraj Badiger
Updated On : 28 Jun 2014, 10:58 am

ಶಿವಮೊಗ್ಗ: ಆಸ್ಕರ್ ಪ್ರಶಸ್ತಿಗೆ ಪ್ರತಿಷ್ಠೆಯ ಗರಿ ಮೂಡುವುದಕ್ಕೆ ಆ ಪ್ರಶಸ್ತಿ ಹಿಂದಿರುವ ಮಾನವೀಯ ಮೌಲ್ಯಗಳೇ ಕಾರಣ ಎಂದು ಸಹ್ಯಾದ್ರಿ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕ ಪ್ರೊ. ಅವಿನಾಶ್ ಹೇಳಿದರು.
ನಗರದ ಕರ್ನಾಟಕ ಸಂಘ ಭವನದಲ್ಲಿ ಶುಕ್ರವಾರ ಶಿವಮೊಗ್ಗ ಬೆಳ್ಳಿಮಂಡಲ, ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಇಲಾಖೆ, ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಆರಂಭಗೊಂಡ ಮೂರು ದಿನಗಳ ಆಸ್ಕರ್ ಸಂಭ್ರಮ - ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಿತ್ರೋತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಶಸ್ತಿಗಳ ಮೌಲ್ಯ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಆಸ್ಕರ್ ಇನ್ನೂ ತನ್ನ ಹಿರಿಮೆ-ಗರಿಮೆ ಉಳಿಸಿಕೊಂಡಿರುವುದು ನಿಜಕ್ಕೂ ಅನುಕರಣೀಯ. ಈ ಪ್ರಶಸ್ತಿಗಾಗಿ ಚಲನಚಿತ್ರ ಕಲಾವಿದರು, ತಂತ್ರಜ್ಞರು ಅತ್ಯಂತ ದುರ್ಗಮ ಹಾದಿಯನ್ನು ಸವೆಸಬೇಕಿದೆ ಎಂದ ಅವರು, ಈ ರೀತಿಯ ಕಠಿಣ ಸ್ಪರ್ಧೆ ಒಡ್ಡುವುದರ ಮೂಲಕ ಆಸ್ಕರ್, ವಿಶ್ವದ ಚಲನಚಿತ್ರ ರಂಗದಲ್ಲಿ ಕ್ರಿಯಾಶೀಲತೆಯನ್ನು ಎತ್ತಿಹಿಡಿದಿದೆ ಎಂದು ತಿಳಿಸಿದರು.
ಆಸ್ಕರ್ ಸಂಭ್ರಮದ ಮೊದಲ ಚಿತ್ರವಾಗಿ ಸೆಂಟ್ ಆಫ್ ಎ ವುಮನ್ ಚಿತ್ರ ಪ್ರದರ್ಶನ ಕಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement