ಹಾಸ್ಟೆಲ್‌ಗೆ ತಾಪಂ ಅಧ್ಯಕ್ಷರ ಭೇಟಿ
ಹೊಸನಗರ: ಪಟ್ಟಣದ ಪ್ರವಾಸಿ ಮಂದಿರದ ಸಮೀಪದ ಮೆಟ್ರಿಕ್ ಪೂರ್ವ ಹೆಣ್ಣು ಮಕ್ಕಳ ಹಾಗೂ ಎಸ್‌ಸಿ-ಎಸ್‌ಟಿ ಹಾಸ್ಟೆಲ್‌ಗೆ ತಾಲೂಕು ಪಂಚಾಯತಿಯ ಪ್ರಭಾರ ಅಧ್ಯಕ್ಷೆ ನಿರ್ಮಲ ಗಣೇಶ್ ಶನಿವಾರ ದಿಢೀರ್ ಭೇಟಿ ನೀಡಿ ಹಾಸ್ಟೆಲ್‌ನ ಸ್ಥಿತಿ-ಗತಿ ಪರಿಶೀಲಿಸಿದರು. ಪರಿಶೀಲನೆ ವೇಳೆ ಶೌಚಾಯದ ಸ್ವಚ್ಛತೆ, ಅಡುಗೆ ಮನೆ ಮತ್ತು ಮಕ್ಕಳ ವಾಸದ ಕೋಣೆ ಸಹಿತ ಉಗ್ರಾಣಕ್ಕೆ ಭೇಟಿ ನೀಡಿದ ಅವರು, ಈ ಎಲ್ಲಾ ಬಳಿಯೂ ಸ್ವಚ್ಛತೆ ಕಂಡು ಸಂತಸ ವ್ಯಕ್ತಪಡಿಸಿದರು. ವಾರಾಂತ್ಯದ ಹಿನ್ನೆಲೆಯಲ್ಲಿ ಕೆಲವೇ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಕಂಡುಬಂದರೂ ಅವರ ಕಷ್ಟ-ಸುಖಗಳನ್ನು ಸ್ವತಹ ವಿಚಾರಿಸಿ ಕ್ರಮ ಕೈಗೊಳ್ಳವ ಭರವಸೆ ನೀಡಿದರು. ದಿಢೀರ್ ಭೇಟಿಯಿಂದ ಹಾಸ್ಟೆಲ್ ಸಿಬ್ಬಂದಿ ವಿಚಲಿತರಾದಂತೆ ಕಂಡುಬಂದರು. ಹಾಸ್ಟೆಲ್ ಆವರಣದಲ್ಲಿ ಮುಂದೆಯೂ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಅಧ್ಯಕ್ಷರು ಸಲಹೆ ನೀಡಿದರು. ಈ ಸಂದರ್ಭ ಮೇಲಿನ ಬೆಸಿಗೆ ಗ್ರಾಪಂ ಅಧ್ಯಕ್ಷೆ ನೆಲ್ಲುಂಡೆ ಲಲಿತಾ, ವಾರ್ಡನ್ ಕಲ್ಪನಾ, ಕಲಾವತಿ ಹಾಜರಿದ್ದು ಮಾಹಿತಿ ನೀಡಿದರು.