ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ನಗು-ಮಗು' ವಾಹನ ಸೇವೆಗೆ ಹಸಿರು ನಿಶಾನೆ

Rashmi Kasaragodu
Updated On : 3 Mar 2014, 11:21 am

ಭದ್ರಾವತಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಗು-ಮಗು ಕಾರ್ಯಕ್ರಮವನ್ನು ಮಾ.1ರಂದು ಶಾಸಕ ಎಂ.ಜೆ. ಅಪ್ಪಾಜಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಗು-ಮಗು ವಾಹನಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆಯಲು ಹೇಳಿದರು.
ಯೋಜನೆಯ ವಿವರವನ್ನು ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಗುಡದಪ್ಪ ಕಸಬಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಾಯಂದಿರ ಮರಣ ಮತ್ತು ಶಿಶುಮರಣ ಕಡಮೆ ಮಾಡಲು ನಗುಮಗು ಆ್ಯಂಬುಲೆನ್ಸ್ ಸೇವೆಯನ್ನು ಜನನಿ ಸುರಕ್ಷಾ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದೆ. ಈ ಸೇವೆಯು ಗರ್ಭಿಣಿಯರು ಹೆರಿಗೆಯಾದ ನಂತರ ಶಿಶುವಿನೊಂದಿಗೆ ಮನೆಗೆ ತಲಪಿಸುವ ಉದ್ದೇಶಕ್ಕಾಗಿ ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗೆ ಒಂದು ಆ್ಯಂಬುಲೆನ್ಸ್ ವಾಹನ ನೀಡಲಾಗಿದೆ ಎಂದು ಸಹ ಅವರು ತಿಳಿಸಿದರು.
ಸದರಿ ವಾಹನವು ಮಹಿಳೆಗೆ ಹೆರಿಗೆಯಾದ ನಂತರ ತಾಯಿ ಮತ್ತು ಮಗುವಿಗೆ ನಂಜು ಆಗುವುದನ್ನು ತಡೆಗಟ್ಟುವ ಉದ್ದೇಶದಿಂದ ಆಸ್ಪತ್ರೆಯಿಂದ ಮನೆಗೆ ಹಿಂದಿರುಗುವ ವೇಳೆ ಸೇವೆಯನ್ನು ಒದಗಿಸುವುದು. ಸದರಿ ವಾಹನದಲ್ಲಿ ಬೇರೆ ರೋಗಿಗಳನ್ನು ಸಾಗಿಸುವ ಅಥವಾ ಕರೆ ತರುವ ಸೌಲಭ್ಯ ಇರುವುದಿಲ್ಲ. ಈ ಸೇವೆಯು ಬಿಪಿಎಲ್ ಮತ್ತು ಎಪಿಎಲ್ ಕಾರ್ಡು ಹೊಂದಿರುವ ಎಲ್ಲಾ ಮಹಿಳೆಯರಿಗೆ ಲಭ್ಯವಿರುತ್ತದೆ ಎಂದು ಸಹ ಈ ಸಂದರ್ಭದಲ್ಲಿ ತಿಳಿಸಲಾಯಿತು.
ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಮತಿ ಹಾಗೂ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement