ವಿಷ ಕುಡಿದು ಎಟಿಎಂನಲ್ಲಿ ಮಲಗಿದ್ದ ವ್ಯಕ್ತಿ ಸಾವು
ಆಯನೂರು: ಇಲ್ಲಿಗೆ ಸಮೀಪದ ಆಯನೂರು ತಾಂಡದ ತುಕಾರಾಂ(30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷ ಕುಡಿದು ಚೋರಡಿಯ ಎಸ್ಬಿಐ ಎಟಿಎಂನಲ್ಲಿ ಮಲಗಿದ್ದ ಅವರನ್ನು ಯಾರೂ ಗಮನಿಸಿರಲಿಲ್ಲ. ಎಟಿಎಂ ಭದ್ರತೆ ಕೆಲಸ ಮಾಡುವವರು ಅನುಮನಾಸ್ಪದವಾಗಿ ಮಲಗಿರುವವರನ್ನು ಪರಿಶೀಲಿಸಿಲಿದಾಗ ವಿಷ ಕುಡಿದಿರುವುದು ಗೊತ್ತಾಯಿತು.
ತಕ್ಷಣವೇ ಸ್ಥಳೀಯರು ತುಕಾರಾಂ ಅವರನ್ನು ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರೆಂದು ಸ್ಥಳೀಯರು ತಿಳಿಸಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.