ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶೇ.48.47ರಷ್ಟು ಮತದಾನ

Rashmi Kasaragodu
Updated On : 3 Mar 2014, 11:24 am

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ 19ನೇ ವಾರ್ಡ್‌ಗೆ ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಶೇ.48.47ರಷ್ಟು ನೀರಸ ಮತದಾನವಾಗಿದೆ. ಇಲ್ಲಿನ ವಿನೋಬನಗರ, ಯಲ್ಲಮ್ಮ ನಗರ ಒಳಗೊಂಡ 19ನೇ ವಾರ್ಡ್‌ಗೆ ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸಾವಿತ್ರಮ್ಮ ಕರಿಬಸಪ್ಪ ಅಕಾಲಿಕ ನಿಧನರಾಗಿದ್ದ ಹಿನ್ನೆಲೆ ಭಾನುವಾರ ಉಪ ಚುನಾವಣೆ ನಡೆಯಿತು. ಬಿಸಿಎಂ 2(ಎ)ಗೆ ಮೀಸಲಾಗಿದ್ದ ಕಾಂಗ್ರೆಸ್ಸಿನಿಂದ ಆಶಾ ಉಮೇಶ, ಬಿಜೆಪಿಯಿಂದ ಬಸಮ್ಮ ಹನುಮಂತಪ್ಪ ಹಾಗೂ ಜೆಡಿಎಸ್‌ನಿಂದ ದಿಲ್‌ಶದ್ ಖಾನಮ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಉಪ ಚುನಾವಣೆಗೆ ಒಟ್ಟು 7071 ಮತದಾರರಿದ್ದರೂ, ಶೇ.48.47ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಶೇ.52.43ರಷ್ಟು ಮತ ಚಲಾವಣೆಯಾಗಿಲ್ಲ. ಉಪಚುನಾವಣೆಗೆ ವಾರ್ಡ್ ಜನತೆ ನೀರಸ ಪ್ರತಿಕ್ರಿಯೆ ತೋರಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಉಪ ಚುನಾವಣೆಗೆ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಮತದಾರರು ಬಂದು, ಮತ ಚಲಾ ಯಿಸುವ ಮನೋ ಭಾವ ತೋರದಿದ್ದುದು ಸ್ಪಷ್ಟವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement