ಗ್ರಾಮೀಣ ಕಲಾವಿದರಿಗೆ ಅವಕಾಶದ ಕೊರತೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾ.4
ಗ್ರಾಮೀಣ ಪ್ರದೇಶದ ಕಲಾವಿದರು ಅವಕಾಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಏಲೆಮರೆ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಬೆಳೆಸಲು ಸೂಕ್ತ ಅವಕಾಶಗಳನ್ನು ಸಂಘ- ಸಂಸ್ಥೆಗಳು ಕಲ್ಪಿಸಲು ಮುಂದೆ ಬರಬೇಕು ಎಂದು ಉಂಬಳೇಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತ ಮಹೇಶ್ ಹೇಳಿದರು.
ಉಂಬಳೇಬೈಲು ರಂಗಮಂದಿರದ ಸಮುದಾಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಾಮ ಪಂಚಾಯಿತಿ, ಕಾವ್ಯಶ್ರೀ ಕಥಾಕೀರ್ತನ ವಿದ್ಯಾಲಯ, ಪತಂಜಲಿ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಗಿರಿಜನ ಉಪಯೋಗದ ಅಡಿಯಲ್ಲಿ ಅಮೃತವರ್ಷಿಣಿ ಕಲಾತಂಡದಿಂದ ಏರ್ಪಡಿಸಿದ್ದ ಮಿಂಚು ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾವ್ಯಶ್ರೀ ಕೀರ್ತನ ವಿದ್ಯಾಲಯದ ಸಂಚಾಲಕಿ ಮೀನಾಕ್ಷಮ್ಮ ಮಾತನಾಡಿ, ಗ್ರಾಮೀಣ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಸಾಮಾಜಿಕ ಹಿನ್ನೆಲೆಯ ಮಿಂಚು ನಾಟಕ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಿದರು.
ಸಂಚಾಲಕಿ ಜ್ಯೋತಿ ಮಾತನಾಡಿ, ಕಲಾವಿದರು ಗುರುವಿನ ಮೂಲಕ ಕಲೆ ಕಲಿಯಬೇಕು ಎಂದು ಹೇಳಿದರು.
ಯೋಗಾಚಾರ್ಯ ಪತಂಜಲಿ ಜೆ. ನಾಗರಾಜ್ ಉಪಸ್ಥಿತರಿದ್ದರು.
ತ್ರೀವೇಣಿ ಗುರುಶಾಂತಪ್ಪ, ಧನಲಕ್ಷ್ಮೀ, ಕೆ.ಆರ್. ರುದ್ರೇಶ್, ಎಸ್.ಎಚ್. ಗುರುಸ್ವಾಮಿ, ಕೊಂಡಯ್ಯದಾಸ್, ರುದ್ರೇಶ್ ಕುರುವ, ಕಿರಣ್, ಶಿವರುದ್ರಪ್ಪ ಜೋಗಿ, ಗಣೇಶ್ ಕೆಂಚನಾಲ, ತುಷಾರ ಗೌರಿ ನಾಟಕ ಪ್ರಸ್ತುತಪಡಿಸಿದರು. ಅಧ್ಯಕ್ಷತೆಯನ್ನು ಅಮೃತವರ್ಷಿಣಿ ಕಲಾ ತಂಡದ ಅಧ್ಯಕ್ಷ ಕೆ.ಪಿ. ತಿಪ್ಪೇರುದ್ರಪ್ಪ ವಹಿಸಿದ್ದರು. ಜ್ಯೋತಿ ಪ್ರಾರ್ಥಿಸಿದರು. ರುದ್ರೇಶ್ ಸ್ವಾಗತಿಸಿ, ದೇವರಾಜ್ ವಂದಿಸಿದರು. ಮಲ್ಲೇಶ್ ನಿರೂಪಿಸಿದರು.