ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೆಎನ್‌ಎನ್‌ಎನ್ ಅಂಗಳದಲ್ಲಿ ಗ್ರಾಮೋತ್ಸವ

Mainashree
Updated On : 5 Mar 2014, 11:28 am

ಶಿವಮೊಗ್ಗ: ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಗ್ರಾಮೋತ್ಸವ ಸಂಭ್ರಮ.
ಗ್ರಾಮೀಣ ಬದುಕನ್ನು ಪರಿಚಯಿಸುವ ಉದ್ದೇಶದಿಂದ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉನ್ಯಾಸಕರು, ಸಿಬ್ಬಂದಿ ಸಂಭ್ರಮಿಸಿದರು.
ಒಂದು ಕಡೆ ಪ್ರಾಂಶುಪಾಲರು ಬತ್ತದ ಜರಡಿ ಹಿಡಿದು, ಸಾಣಿಸಿ ಬತ್ತದ ರಾಶಿಗೆ ಪೂಜಿಸಿದರೆ, ಇನ್ನೊಂದು ಕಡೆ ಮಸಾಲೆ ಮಂಡಕ್ಕಿ, ಬೋಂಡ ಮಜ್ಜಿಗೆಗೆ ವಿದ್ಯಾರ್ಥಿಗಳು ಮುಗಿಬಿದ್ದ ದೃಶ್ಯ ಕಂಡುಬಂತು.
ಲಾಭದಾಯಕ ಉದ್ಯಮ: ಎಂಬಿಎಂ ಮಾರ್ಕೆಟಿಂಗ್ ವಿದ್ಯಾರ್ಥಿಗಳು ಆಯೋಜಿಸಿದ್ದ ಗ್ರಾಮೋತ್ಸವ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಆರ್. ಶ್ರೀನಿವಾಸರಾವ್ ಕುಂಟೆ, ಎಂಬಿಎ ವಿದ್ಯಾರ್ಥಿಗಳು ಗ್ರಾಮೀಣ, ಕೃಷಿ, ಕೈಗಾರಿಕೆಯನ್ನು ಲಾಭದಾಯಕ ಉದ್ಯಮವಾಗಿ ನಿರ್ವಹಣೆ ಮಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಇಂದಿನ ಯುವಕರು ನಗರ ಪ್ರದೇಶಗಳಿಗೆ ವಲಸೆ ಹೋಗುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಆಹಾರ ಉತ್ಪಾದನೆ, ಭದ್ರತೆ ಕುಸಿತ ಉಂಟಾಗಬಹುದೆಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಂಬಿಎ ವಿಭಾಗದ ನಿರ್ದೇಶಕ ಡಾ.ಎಂ.ಜಿ. ಕೃಷ್ಣಮೂರ್ತಿ, ಇಂತಹ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದ ವಾಸ್ತವ ಚಿತ್ರಣ ಪರಿಚಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಹಾಯಕ ಪ್ರಾಧ್ಯಾಪಕರಾದ ಐಶ್ವರ್ಯ ಸ್ವಾಗತಿಸಿದರು. ಅಂಜಲಿ ನಿರೂಪಿಸಿದರು. ವರ್ಷ ವಂದಿಸಿದರು.
ಇದೇ ಸಂದರ್ಭದಲ್ಲಿ ಮಾರ್ಕೆಟಿಂಗ್ ವಿಭಾಗದ ವಿದ್ಯಾರ್ಥಿಗಳು ಶಿವಮೊಗ್ಗ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ ಕಿರುಚಿತ್ರ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದ ಗುಡಿ ಕೈಗಾರಿಕೆ, ಆಹಾರ ಪದಾರ್ಥಗಳ ಮಾರಾಟ ಆಯೋಜಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement