ಬ್ಯಾಡ್ಮಿಂಟನ್ ಸ್ಪರ್ಧೆ ವಿಜೇತರು
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾ.4
ಸ್ನೇಹಮಯಿ ಯುವಕ ಸಂಘ ಮತ್ತು ರೋವರ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ವಿಜೇತರಾದ ಪುರುಷರ ವಿಭಾಗದಲ್ಲಿ ವಿಜೇತರಿಗೆ ಎಐಸಿಸಿ ಸದಸ್ಯ ಡಾ. ಮಂಜುನಾಥ ಭಂಡಾರಿ ಅವರು ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಿದರು.
ಈ ಸಂದರ್ಭದಲ್ಲಿ ಸ್ನೇಹಮಯಿ ಸಂಘದ ಅಧ್ಯಕ್ಷ ಚಿನ್ನಪ್ಪ ಹಾಗೂ ರೋವರ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಶಾಸ್ತ್ರಿ ಹಾಗೂ ಕಾರ್ಯದರ್ಶಿ ಎಚ್.ಸಿ. ಸುರೇಶ್, ಮತ್ತು ಜಿ. ವಿಜಯಕುಮಾರ್, ಕಾರ್ಯದರ್ಶಿ ಎನ್.ರವಿ, ಹರೀಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವಿಜೇತರು: 40 ವರ್ಷ ಮೇಲ್ಪಟ್ಟ ವಿಭಾಗ- ಎಂ.ಬಿ. ವಿನಾಯಕ ಮತ್ತು ಅಗಡಿ ಮಹೇಶ್(7777), ಎರಡನೇ ಬಹುಮಾನ ವಿಜೇತರು- ಕೆ. ರವಿ ಮತ್ತು ಈಶ್ವರ್ (4444), ಮೂರನೇ ಬಹುಮಾನ- ನಂದೀಶ್ ಮತ್ತು ಶ್ರೀಧರ್(2222), ನಾಲ್ಕನೇ ಬಹುಮಾನ- ಅರುಣ್ ಮತ್ತು ಸುನೀಲ್.ಕೆ (1111).
40 ವರ್ಷ ಒಳಗಿನ ಮೊದಲನೇ ಬಹುಮಾನದ ವಿಜೇತರು - ಸುಬ್ಬು ಮತ್ತು ಬಗಾಸ್(9999), ಎರಡನೇ ಬಹುಮಾನ- ಅರುಣ ಮತ್ತು ಅಭಿಷೇಕ್ (6666), ಮೂರನೇ ಬಹುಮಾನ - ರವಿ ಮತ್ತು ಈಶ್ವರ್(3333), ನಾಲ್ಕನೇ ಬಹುಮಾನ- ವಿನಾಯಕ ಮತ್ತು ಅಗಡಿ ಮಹೇಶ್ (1111).