ಶಾಲೆ ಜಾಗ ಕಬಳಿಕೆ: ಆರೋಪ
ಕ.ಪ್ರ.ವಾರ್ತೆ ್ಣ ಹೊಸನಗರ ್ಣ ಮಾ. 4
ಮೇಲಿನಬೇಸಿಗೆ ಗ್ರಾ.ಪಂ ಅಧ್ಯಕ್ಷೆ ನೆಲ್ಲುಂಡೆ ಲಲಿತಾಇವರು ಸರ್ವೆ ನಂ. 30ರಲ್ಲಿನ ಕ್ರೀಡಾಂಗಣಕ್ಕೆ ಮೀಸಲಾದ ಶಾಲಾ ಜಾಗ ಕಬಳಿಕೆ ಮಾಡಿಕೊಂಡಿದ್ದುಅಲ್ಲದೆ ಶಾಲಾ ಪ್ರಗತಿ ನಿರಂತರವಾಗಿಅಡ್‌ಡಗಾಲಾಗುತ್ತ ಬಂದಿದ್ದಾರೆಎಂದು ಆರೋಪಿಸಿರುವ ಕಾರಣಗಿರಿ ಪ್ರೌಢಶಾಲೆ ಅಭಿವೃದ್ದಿ ಸಮಿತಿ, ಬುಧವಾರದಂದು ಅಧ್ಯಕ್ಷೆ ಲಲಿತಾ ವಿರುದ್ದ ಮತ್ತು ಅವರು ಮಾಡಿಕೊಂಡ ಒತ್ತುವರಿತೆರವಿಗೆ ಆಗ್ರಹಿಸಿ ರಸ್ತೆತಡೆ ಹಾಗೂ ಪ್ರತಿಭಟನೆಗೆ ಮುಂದಾಗಿದೆ.
ಕಾರಣಗಿರಿ ಶಾಲೆ 1982ರಲ್ಲಿ ಆರಂಭವಾಗಿದ್ದುಉತ್ತಮ ಪಲಿತಾಂಶ ಪಡೆಯುತ್ತ ಬಣದಿದೆ. ಕಾರಣಗಿರಿಯಲ್ಲಿನ ಸರ್ವೆ ನಂ 30ರಲ್ಲಿ 10 ಎಕರೆಜಾಗವನ್ನು ಸೋನಲೆ ಮಂಡಲ ಪಂಚಾಯಿತಿ 1989ರಲ್ಲಿ ಮಂಜೂರು ಮಾಡಿದೆ.
ಜಾಗ ಒತ್ತುವರಿ: ಶಾಲಾ ಪಕ್ಕದ ನಿವಾಸಿ ಲಲಿತಾ ಶಾಲಾ ಜಾಗವನ್ನು ಅನಧಿಕೃತವಾಗಿ ಕಬಳಿಸಿದ್ದು ಅಲ್ಲದೆ ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಮೇಲಿನ ಬೇಸಿಗೆ ಗ್ರಾ.ಪಂ ಅಧ್ಯಕ್ಷೆಯಾದ ಇವರು ತಮ್ಮ ಅಧಿಕಾರ ಉಪಯೋಗಿಸಿಕೊಂಡು ಶಾಲೆಗೆ ಯಾವುದೆ ಅನುದಾನ, ಅಭಿವೃದ್ಧಿ ಕಾಮಗಾರಿ ಮಂಜೂರು ಮಾಡದೆ ತಮ್ಮ ಸಂಕುಚಿತ ಬುದ್ದಿಯನ್ನುತೋರಿದ್ದಾರೆ ಎಂದು ಶಾಲಾಬಿವೃದ್ಧಿ ಸಮಿತಿಅಧ್ಯಕ್ಷ ಸುರೇಶ್ ಆರೋಪಿಸಿದರು.
ಈಗ ಶಾಲಾ ಕ್ರೀಡಾಂಗಣ ನಿರ್ಮಾಣವನ್ನು ಪೈಕಾ ಯೋಜನೆಯಡಿಯಲ್ಲಿ ಮಾಡಲಾಗುತ್ತಿದೆ. ಆದರೆ ಲಲಿತಾ ಕಾಮಗಾರಿ ಮಾಡದಂತೆ ಅಡ್‌ಡಿಪಡಿಸಿ ಪೊಲೀಸರಲ್ಲಿ ದೂರು ನೀಡುವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಪಟ್ಟಭದ್ರ ಅಧ್ಯಕ್ಷೆ ವಿರುದ್ದ ನಾಗರೀಕರು, ಪೋಷಕರು ಸೇರಿ ಶಾಲಾ ಜಾಗ ಉಳಿಸಿ ಎಂದು ನ್ಯಾಯಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.