9 ರಿಂದ ಜಿಲ್ಲಾದ್ಯಂತ ಕಾಂಗ್ರೆಸ್ ಪಾದಯಾತ್ರೆ
ಶಿಕಾರಿಪುರ: ಬರಲಿರುವ ಲೋಕಸಭಾ ಚುನಾವಣೆಯು ಭ್ರಷ್ಟಾಚಾರ ಪರ ಹಾಗೂ ವಿರೋಧದ ಚುನಾವಣೆಯಾಗಿದ್ದು, ಜನತೆಗೆ ವಿರೋಧಪಕ್ಷದ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಮಾ. 9 ರಿಂದ ಜಿಲ್ಲಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ತಿಳಿಸಿದರು.
ಗುರುವಾರ ಪಟ್ಟಣದ ಮಾಸೂರು ವೃತ್ತದ ಬಳಿಯಲ್ಲಿ ಕಾಂಗ್ರೆಸ್ ತಾಲೂಕು ಘಟಕ ಹಾಗೂ ಯುವ ಘಟಕದ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿಯನ್ನು 7 ರ ಶುಕ್ರವಾರ ಅಧಿಕೃತವಾಗಿ ಘೋಷಿಸಲಾಗುತ್ತದೆ. ತಾಲೂಕಿನ ಪುನೇದಹಳ್ಳಿ ಗ್ರಾಮದಿಂದ ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಪಾದಯಾತ್ರೆಯನ್ನು ಆರಂಭಿಸಿ 10-15 ಕಿ.ಮೀ ಕ್ರಮಿಸಿ ನಂತರದಲ್ಲಿ ಶಿರಾಳಕೊಪ್ಪದಲ್ಲಿ ಬಹಿರಂಗ ಸಭೆಯನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ಕಡೆಗಣಿಸಿಲ್ಲ: ಪಕ್ಷದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪನವರನ್ನು ಕಡೆಗಣಿಸಲಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಕುಮಾರ್ ಬಂಗಾರಪ್ಪನವರು ಪಕ್ಷದ ಮುಖಂಡರಾಗಿದ್ದು ಯಾರನ್ನೂ ಕಡೆಗಣಿಸುವ ಪ್ರಶ್ನೆಯಿಲ್ಲ ಎಂದರು.
ಕೆಪಿಸಿಸಿ ಸದಸ್ಯ ನಗರದ ಮಹಾದೇವಪ್ಪ, ಶಾಂತವೀರಪ್ಪಗೌಡ, ಬಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಪುರಸಭಾ ಸದಸ್ಯ ಮಹೇಶ್ ಹಲ್ಮಾರ್, ಮಧು, ಯಲ್ಲಪ್ಪ, ಎಪಿಎಂಸಿ ಸದಸ್ಯ ಅರುಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಲಪ್ಪ, ತಾ.ಯುವ ಘಟಕದ ಅದ್ಯಕ್ಷ ಭಂಡಾರಿ ಮಾಲತೇಶ್, ಮುಖಂಡ ಹಬೀಬುಲ್ಲಾ, ಶಿವಶಂಕರ್, ರಮೇಶ್, ಬಿ.ಎಲ್. ರವೀಂದ್ರ, ಸುರೇಶ್ ಧಾರವಾಡದ, ಮೌನೇಶಾಚಾರ್, ಬುಡೇನ್ ಸಾಬ್, ಹನುಮಂತಪ್ಪ ಮಲ್ಲೇನಹಳ್ಳಿ ಮತ್ತಿತರರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
'ಕುಮಾರನಿಗೆ ಟಿಕೆಟ್ ನೀಡಲಿ'
ಸೊರಬ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನತೆಗೆ ತಿಳಿಸುವ ಉದ್ಧೇಶದಿಂದ ಕಾಂಗ್ರೇಸ್ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಹತ್ತು ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಚೇರಿಯಲ್ಲಿ ಗುರುವಾರ ನಡೆದ ಕಾರ್ಯಕರ್ತ ಮುಖಂಡರ ಸಭೆ ಉದ್ಧೇಶಿಸಿ ಮಾತನಾಡಿದ ಅವರು, ಇದೇ ತಿಂಗಳ 9 ರಿಂದ 16 ರವರೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಯಲಿದ್ದು, ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಚಿವ ಕಿಮ್ಮನೆ ರತ್ನಾಕರ, ಮಾಜಿ ಸಚಿವ ಕುಮಾರ ಬಂಗಾರಪ್ಪ ನೇತೃತ್ವ ವಹಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಜನಾನುರಾಗಿ ಆಗಿರುವ ಕುಮಾರ ಬಂಗಾರಪ್ಪ ಅವರಿಗೆ ಈ ಬಾರಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಪಕ್ಷ ಅವಕಾಶ ನೀಡಬೇಕು. ಸೊರಬ ಶಾಸಕ ಲಂಗುಲಗಾಮಿಲ್ಲದೆ ನಾಲಿಗೆ ಹರಿಬಿಡುತ್ತಿದ್ದು, ಅಗತ್ಯ ಸಂದರ್ಭದಲ್ಲಿ ಕಡಿವಾಣ ಹಾಕಲು ಕಾರ್ಯಕರ್ತರು ಹಿಂಜರಿಯಬಾರದು ಎಂದರು.
ಬ್ಲಾಕ್ ಅಧ್ಯಕ್ಷ ಕೆ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ್, ಹಾಲಪ್ಪ, ಮಾರ್ಟಿನ್, ಚೌಟಿ ಚಂದ್ರಶೇಖರ್, ಆನವಟ್ಟಿ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ್ ಗುತ್ತೇದಾರ್, ಪಪಂ ಸದಸ್ಯರಾದ ಎಂ.ಡಿ.ಉಮೇಶ್, ಸುಜಾಯತುಲ್ಲ, ಮಂಚಿ ಹನುಮಂತಪ್ಪ, ರೇವಣಪ್ಪ, ಯೂಸೂಫ್ ಸಾಬ್, ತಬಲಿ ಬಂಗಾರಪ್ಪ, ಶಬ್ಬೀರ್ ಅಹ್ಮದ್ ಇತರರು ಇದ್ದರು.
6ಕೆ ಎಸ್ ಆರ್ ಬಿ-1
ಸೊರಬದ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಉದ್ಧೇಶಿಸಿ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿದರು.