ಶಿಕ್ಷಣವಿಲ್ಲದೆ ಸಾಧನೆ ಕಷ್ಟಸಾಧ್ಯ; ಮದೀಶಾ
ಭದ್ರಾವತಿ: ಮಕ್ಕಳಿಗೆ ಶಿಕ್ಷಣ ಅತಿಮುಖ್ಯವಾದುದು ಎಂದು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಜಿಐಓ) ಅಧ್ಯಕ್ಷೆ ಮದೀಶಾ ಅಫ್ಷಾನ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಭದ್ರಾವತಿ ಘಟಕದ ಜಿಐಒ ಪ್ರಾರಂಭಿಸಿದ ಮದರಸ ಇಸ್ಲಾಹುಲ್ ಅಲ್ ಬನಾತ್ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲವೆಂದರು.
ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರ ಬಗ್ಗೆ ಪೋಷಕರಲ್ಲಿ ಉದಾಸೀನ ಮನೋಭಾವವಿದೆ. ಅದು ದೂರಾಗಬೇಕು. ಮಕ್ಕಳನ್ನು ಮದರಸ ಅಥವಾ ಯಾವುದೇ ಶಾಲೆಗೆ ಸೇರಿಸುವಲ್ಲಿ ಪೋಷಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಮಾತೆ ಇಸ್ಲಾಮಿ ಹಿಂದ್ನ ಹಫೀಜ್ ಉರ್ ರೆಹಮಾನ್, ಸೈಯದ್ ಅಬ್ದುಲ್ ಮಜೀದ್, ಅಬ್ದುಲ್ ಖದೀರ್ ಇತರರಿದ್ದರು.
--