ಅರಣ್ಯ ಹಕ್ಕು ಕಾನೂನು ಬಳಕೆಯಾಗಲಿ
ಜೋಗ್‌ಫಾಲ್ಸ್: ಸಾಗರ ತಾಲೂಕಿನ ಜನತೆ ಅರಣ್ಯ ಹಕ್ಕು ಕುರಿತು ಇರುವ ಕಾನೂನನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.
ಅವರು ತಾಳಗುಪ್ಪದ ರಂಗನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅರಣ್ಯ ಹಕ್ಕು ಸಮಿತಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾನೂನು ಸಮರ್ಪಕವಾಗಿರಬೇಕು. ಆದರೆ ಈ ಭೂಮಿ ಹಂಚಿಕೆಯ ವಿಷಯದಲ್ಲಿ ಅಷ್ಟೊಂದು ಪರಿಪೂರ್ಣವಾಗಿರಲು, ದಾಖಲೆಗಳನ್ನು ಹೊಂದಿರಲು ಕಷ್ಟವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಗ್ರಾಮ ಅರಣ್ಯ ಸಮಿತಿ ರೈತರ ಹಿತದೃಷ್ಟಿಯಿಂದ ತುಸು ಉದಾರತೆ ತೋರಿಸಬೇಕಾಗುತ್ತದೆ ಎಂದರು.
ಜಿಪಂ ಸದಸ್ಯೆ ಲಲಿತಾ ನಾರಾಯಣ್, ತಾಪಂ ಮಾಜಿ ಅಧ್ಯಕ್ಷ ಮಹಭಲೇಶ್ವರ್ ಕುಗ್ವೆ, ಮಲ್ಲಿಕಾರ್ಜುನ ಹಕ್ರೆ, ಸುಮಿತ್ರಾ ಮಹಭಲೇಶ್ವರ್, ಲೋಕೇಶ್, ನಾಗರಾಜ್ ಮಂಜಿನಕಾನು, ಪ್ರಕಾಶ್ ಪಿಡಿಒ, ಕೃಷ್ಣ, ತಹಸೀಲ್ದಾರ್ ಭಾಗ್ಯಲಕ್ಷ್ಮಿ, ವಿದ್ಯಾ ಬಸವರಾಜ್, ಮಂಜಪ್ಪ ಸೈದೂರು ಉಪಸ್ಥಿತರಿದ್ದರು.