ನಾಳೆ ನಮೋ ಭಾರತ್
ಶಿವಮೊಗ್ಗ: ನಮೋ ಬ್ರಿಗೇಡ್ ಮಾ.9ರಂದು ಸಂಜೆ 5.30ರಿಂದ 8.30ರ ವರೆಗೆ ಇಲ್ಲಿನ ಎನ್ಡಿವಿ ಹಾಸ್ಟೆಲ್ ಮೈದಾನದಲ್ಲಿ ನಮೋ ಭಾರತ್ ಕಾರ್ಯಕ್ರಮ ಆಯೋಜಿಸಿದೆ. ಸ್ವಾತಂತ್ರ್ಯಾ ನಂತರದ ಭಾರತ ಹಾಗೂ ಭವಿಷ್ಯದ ಭಾರತ ಕುರಿತಂತೆ ಗೀತ- ಕಥನ ಇದಾಗಿದ್ದು, ಸೂಲಿಬೆಲೆ ಚಕ್ರವರ್ತಿಯವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಿಗೆ ಈ ಕಾರ್ಯಕ್ರಮ ಸಮರ್ಪಿಸಲಾಗುತ್ತಿದೆ.
ಧೀರರಾಜ್ ಆಯ್ಕೆ
ಶಿವಮೊಗ್ಗ: ಶ್ರೀ ಗುರುಸಿದ್ದರಾಮೇಶ್ವರ ಭೋವಿ ವಿವಿದೊದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಧೀರರಾಜ್ ಹೊನ್ನವಿಲೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಣೇಶ್ ಅವಿರೋಧ ಆಯ್ಕೆಯಾದರೆಂದು ಸಂಘದ ಕಾರ್ಯದರ್ಶಿ ಸೌಭಾಗ್ಯಲಕ್ಷ್ಮಿ ತಿಳಿಸಿದ್ದಾರೆ.