ಪೆಸೆಟ್ ಕಾಲೇಜಲ್ಲಿ ವಿಪ್ರೋ ಕ್ಯಾಂಪಸ್
ಶಿವಮೊಗ್ಗ: ಪೆಸೆಟ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಶುಕ್ರವಾರ ನಾಲ್ಕು ವರ್ಷಗಳ ವಿಶೇಷ ಕೋರ್ಸ್‌ಗೆ ವಿಪ್ರೋ ಕಂಪನಿಯವರು ಕ್ಯಾಂಪಸ್ ಆಯ್ಕೆ ನಡೆಸಿದರು.
ವಿಪ್ರೋದ ವೇಸ್‌ವಿಸ್ತಾ ಕಾರ್ಯಕ್ರಮದಡಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾಂತ್ರಿಕೇತರ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಅವರಲ್ಲಿ ಕೌಶಲ್ಯ ಅಭಿವೃದ್ಧಿಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ವಿಪ್ರೋ ಕ್ಯಾಂಪಸ್ ಆಯ್ಕೆ ವಿಭಾಗದ ಮುಖ್ಯಸ್ಥ ರಾಜೀವ್‌ಕುಮಾರ್ ತಿಳಿಸಿದರು.
ವಿಪ್ರೋ ಸಾಫ್ಟ್‌ವೇರ್ ಟೆಕ್ನಾಲಜಿ ಅಕಾಡೆಮಿಯಿಂದ ವಿಜ್ಞಾನ ಪದವೀದರರಿಗೆ ಮಾಹಿತಿ ತಂತ್ರಜ್ಞಾನ ಕುರಿತು 4 ವರ್ಷಗಳ ತರಬೇತಿ ನೀಡುವ ಜೊತೆಗೆ ಐಟಿಯಲ್ಲಿ ಮಾಸ್ಟರ್ ಆಫ್ ಸೈನ್ಲ್ ಪದವಿ ನೀಡಲಾಗುತ್ತದೆ ಎಂದು ವಿವರಿಸಿದರು.
ಬಿಎಸ್ಸಿ, ಬಿಸಿಎಂ ಪದವಿ ವಿದ್ಯಾರ್ಥಿಗಳನ್ನು ಈ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದ ಅವರು, 48 ತಿಂಗಳ ಕೋರ್ಸನ್ನು 8 ಸೆಮಿಸ್ಟರ್‌ಗಳಲ್ಲಿ ನಡೆಸಲಾಗುತ್ತದೆ. ಪ್ರತಿ ಸೆಮಿಸ್ಟರ್‌ಗೆ ನಾಲ್ಕು ವಿಷಯಗಳನ್ನು ಅಳವಡಿಸಲಾಗುತ್ತದೆ.
ಈ ಕೋರ್ಸ್ ಮುಗಿಸಿದವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಬರುತ್ತವೆ. ಕೌಶಲ್ಯಾಭಿವೃದ್ಧಿಯೇ ನಮ್ಮ ಮುಖ್ಯ ಗುರಿಯಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಇದೇ ಯೋಜನೆಯಡಿ ಸುಮಾರು 60 ಸಾವಿರ ವಿದ್ಯಾರ್ಥಿಗಳ ಸಂದರ್ಶನ ನಡೆಸಲಾಗಿತ್ತೆಂದರು.