ಯಮಹಾ ಆಲ್ಫ ಸ್ಕೂಟರ್ ಬಿಡುಗಡೆ
ಶಿವಮೊಗ್ಗ: ಇಲ್ಲಿನ ಶಂಕರಮಠ ರಸ್ತೆಯ ಓಂ ಗಣೇಶ್ ಮೋಟರ್ಸ್ ಯಮಹಾ ಶೂರೂಂನಲ್ಲಿ ಶುಕ್ರವಾರ ಯಮಹಾ ಕಂಪನಿಯ ನೂತನ ಆಲ್ಫ ಸ್ಕೂಟರ್ ಶಿವಮೊಗ್ಗ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಈ ಸ್ಕೂಟರ್ 113 ಸಿಸಿ, 4 ಸ್ಟ್ರೋಕ್ ಎಂಜಿನ್, ಟೆಲಿಸ್ಕೋಪಿಕ್ ಸೆಸ್ಪೆನ್‌ಷನ್, ಸಿವಿಟಿ ಕ್ಲಚ್ ಸಿಸ್ಟಂ ಹೊಂದಿದೆ. ಪ್ರತಿ ಲೀಟರ್‌ಗೆ 62ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಶೋರೂಂ ಮುಖ್ಯಸ್ಥರು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೆನರಾ ಬ್ಯಾಂಕಿನ ಡಿಜಿಎಂ ಎಂ.ಎಂ. ಚಿನಿವಾರ್, ಇಂಡಿಯಾ ಯಮಹದ ನಾಗರಾಜ, ಶೂರೂಂನ ಮಾಲೀಕ ಭಾಸ್ಕರ್ ಕಾಮತ್, ಹರ್ಷ ಕಾಮತ್, ವ್ಯವಸ್ಥಾಪಕ ಆರ್. ವೀರಭದ್ರಪ್ಪ, ರೋಟರಿಯ ವಿಜಯಕುಮಾರ್, ಅ.ನಾ. ವಿಜಯೇಂದ್ರ ಮತ್ತಿತರರು ಉಪಸ್ಥಿತರಿದ್ದರು.