ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಯಶಸ್ವಿನಿ ಕಾರ್ಡ್ ವಿತರಣೆ

Rashmi Kasaragodu
Updated On : 8 Mar 2014, 11:45 am

ಜೋಗ್‌ಫಾಲ್ಸ್: ಮಹಿಳಾ ಸಬಲೀಕರಣಕ್ಕೆ ಸಂಘಗಳು ಶಕ್ತಿ ನೀಡುತ್ತವೆ ಎಂದು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್ ಹೇಳಿದರು.
ತಾಳಗುಪ್ಪದ ಮಹಿಳಾ ಸಹಕಾರ ಸಂಘದಲ್ಲಿ ಸದಸ್ಯೆಯರಿಗೆ ಯಶಸ್ವಿನಿ ಕಾರ್ಡ ವಿತರಿಸಿ ಮಾತನಾಡಿದರು.
ವ್ಯವಹಾರ ಕ್ಷೇತ್ರ ಪುರುಷರಿಗಷ್ಟೇ ಸಾಧ್ಯ ಎನ್ನುವ ಇಂದಿನ ದಿನಮಾನದಲ್ಲಿ ಗ್ರಾಮದಲ್ಲಿನ ಮಹಿಳೆಯರು ಸಹಕಾರ ಸಂಘ ಸ್ಥಾಪಿಸಿಕೊಂಡು ಸಾಲ ಸೌಲಭ್ಯ, ವ್ಯಾಪಾರ ವಹಿವಾಟು, ಪಿಗ್ಮಿ ಸಂಗ್ರಹಣೆಯಂತಹ ವ್ಯವಹಾರ ನಡೆಸುವುದು ಶ್ಲಾಘನೀಯ. ಸಂಘ ತನ್ನ ವ್ಯವಹಾರ ಕ್ಷೇತ್ರ ವಿಸ್ತರಿಸಿಕೊಂಡರೆ ಜಿಲ್ಲಾ ಸಹಕಾರ ಬ್ಯಾಂಕ್ ಹಣಕಾಸಿನ ನೆರವು ನೀಡಿಲು ಸಿದ್ಧವಿದೆ. ಇದನ್ನು ಬಳಸಿಕೊಂಡು ಬ್ಯಾಂಕ್ ಇನ್ನೂ ಹೆಚ್ಚಿನ ಬೆಳವಣಿಗೆ ಸಾಧಿಸಬಹುದು ಎಂದರು.
ಸಹಕಾರ ಸಂಘದ ಅಧ್ಯಕ್ಷೆ ಶಕುಂತಲಾ ಆಚಾರ್ ಮಾತನಾಡಿ, ಸಹಕಾರ ಸಂಘ ಪ್ರಾರಭಗೊಂಡು 25 ವರ್ಷಗಳಾಗಿದ್ದು, ಈ ವರ್ಷ ಸಂಘ ಬೆಳ್ಳಿ ಹಬ್ಬ ಆಚರಿಸಲಿದೆ. ಗ್ರಾಮದಲ್ಲಿರುವ ಮಹಿಳೆಯರು ಸಂಘದ ಸದಸ್ಯತ್ವ ಪಡೆದು ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಕೈಜೋಡಿಸಬೇಕು ಎಂದರು.
ಶ್ರೀಮತಿಯಮ್ಮ, ಕುಸುಮ ಕೋರಿ, ಶೈಲ ಸಕ್ರೆ, ಮಂದಾಕಿನಿ ಮತ್ತಿತರರು ಹಾಜರಿದ್ದರು. ಕಾರ್ಯದರ್ಶಿ ಸ್ವಾಗತಿಸಿ, ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement