ಸೌರಭದಿಂದ ಸಾಂಸ್ಕೃತಿಕ ರಸದೌತಣ
ಶಿವಮೊಗ್ಗ: ಸೌರಭ ಸಂಸ್ಥೆಯು ಮಾ.10ರಿಂದ 16ರ ವರೆಗೆ ಕುವೆಂಪು ರಂಗಮಂದಿರದಲ್ಲಿ ಜುಗಲ್‌ಬಂದಿ, ಕೋಳಲು ವಾದನ ಯಕ್ಷಗಾನ-ಹರಿನಾಮ ಸಂಕೀರ್ತನೆ ಹಾಡುಗಾರಿಕೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಶ್ರೀ ಪೂರ್ಣಪ್ರಜ್ಞಾ ಸೇವಾ ಸಮಿತಿ, ಭಜನಾ ಮಂಡಳಿ, ಶ್ರೀರಾಮ ಭಜನಾ ಮಂಡಳಿ ಸಹಯೋಗ ನೀಡುತ್ತಿದ್ದು, 10ರಂದು ಸಂಜೆ 5.30ರಿಂದ ವಿದ್ವಾನ್ ರಾಯಚೂರು ಶೇಷಗಿರಿ ದಾಸರು ಹಾಗೂ ಅನಂದ ಕುಲಕರ್ಣಿಯವರ ಜುಗಲ್‌ಬಂದಿ ಇದ್ದು, 11ರಂದು ಬಿ.ಕೆ. ಅನಂತರಾಮ ಅವರಿಂದ ಕೊಳಲು ವಾದನವಿರುತ್ತದೆ.
12ರಂದು ನರಕಾಸುರ-ಗರುಡಗರ್ವ ಭಂಗ, 13ರಂದು ಓಂನಮ- ಶಿವಾಯ, 14ರಂದು ಮೋಹಿನಿ ಭಸ್ಮಾಸುರ, 15ರಂದು ಮಹಿಷಾಸುರ ಮರ್ಧಿನಿ ಯಕ್ಷಗಾನ ಮತ್ತು ಹಾಡುಗಾರಿಕೆ ಕಾರ್ಯಕ್ರಮವನ್ನು ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಪ್ರಸ್ತುತಪಡಿಸುತ್ತಿದೆ.
ಸಂಜೆ ಪೂರ್ಣ ಪ್ರಜ್ಞಾ ಭಜನಾ ಮಂಡಳಿ ಸದಸ್ಯರು ಹರಿನಾಮ ಸಂಕೀರ್ತನೆ ನಡೆಸಿಕೊಡಲಿದ್ದು, 16ರಂದು ಎಡನೀರು ಮಠದ ಕೇಶವಾನಂದ ಭಾರತಿ ಶ್ರೀಪಾದಂಗಳ ಹಾಡುಗಾರಿಕೆ ಇರುತ್ತದೆ ಎಂದು ಸೌರಭ ಸಂಸ್ಥೆ ಅಧ್ಯಕ್ಷ ಪ್ರಸನ್ನಕುಮಾರ್ ತಿಳಿಸಿದ್ದಾರೆ.