ಹಂದಿಗಳ ಕಾಟ ತಡೆಗೆ ಆಗ್ರಹ
ಸಾಗರ: ಪಟ್ಟಣದ ಗಾಂಧಿನಗರ ಬಡಾವಣೆಯಲ್ಲಿ ಹಂದಿಗಳ ಕಾಟ ಹೆಚ್ಚಾಗಿದ್ದು, ರಕ್ಷಣೆಗೆ ಸಾರ್ವಜನಿಕರು ನಗರಾಡಳಿತವನ್ನು ಕೋರಿದ್ದಾರೆ. ಗಾಂಧಿನಗರದಲ್ಲಿ ಹಂದಿಗಳು ಸಿಕ್ಕಾಪಟ್ಟೆ ಹೆಚ್ಚಿವೆ. ವಾಹನ ಸಂಚಾರಕ್ಕೆ ತೊಂದರೆ ನೀಡುತ್ತಿವೆ. 2 ದಿನಗಳ ಹಿಂದೆ ಕೊಟ್ಟಿಗೆಯೊಂದಕ್ಕೆ ನುಗ್ಗಿದ ಹಂದಿಗಳು ಕರುವನ್ನು ಎಳೆದುಹಾಕಿವೆ. ನಗರಾಡಳಿತ ಕ್ರಮ ಕೈಗೊಳ್ಳಬೇಕು ಎಂಬುದು ಅಲ್ಲಿನ ಜನತೆಯ ಒತ್ತಾಯವಾಗಿದೆ.