ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸಂಗೀತಕ್ಕೆ ಅಪರಾಧ ಕುಗ್ಗಿಸುವ ಶಕ್ತಿ'

Lingaraj Badiger
Updated On : 9 Mar 2014, 10:29 am

ಜೋಗ್ ಫಾಲ್ಸ್: ಸಂಗೀತಕ್ಕೆ ಅಪರಾಧ ಕುಗ್ಗಿಸುವ ಶಕ್ತಿ ಇದೆ. ಇಟಲಿಯ ಸರ್ವಾಧಿಕಾರಿ ಮುಸಲೇನಿಯಂತವರೇ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಮಾರುಹೊಗಿದ್ದರು ಎಂಬುದಾಗಿ ಮೈಸೂರು ಅರಮನೆಯ ವಿದ್ವಾನ್ ಎ.ವಿ. ದತ್ತಾತ್ರೇಯ ತಿಳಿಸಿದರು.
ಇಲ್ಲಿನ ದ್ವಿಮುಖ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವಾಲಯ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತ ಪ್ರತಿನಿತ್ಯವೂ ಮನೆಯಲ್ಲಿ ನಿತ್ಯೋತ್ಸವ ಕಾರ್ಯಕ್ರಮವಾಗಬೇಕು. ಇದರಿಂದ ಮನಸ್ಸಿಗೆ ಏಕಾಗ್ರತೆ, ದೇವರಲ್ಲಿ ಭಕ್ತಿ- ಭಾವ ಬೆಳೆದು, ಸ್ವಾರ್ಥಸಹಿತ ರಹಿತ ವ್ಯಕ್ತಿಯನ್ನಾಗಿಸಲು, ಎಲ್ಲರೊಂದಿಗೆ ಪ್ರೀತಿ- ಸಂಯಮದಿಂದ ವರ್ತಿಸುವಂತಾಗಲು ಬೆಳೆಸಿಕೊಳ್ಳಲು ಸಂಗೀತದ ಸತತ ಅಭ್ಯಾಸದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಗಾಯಕಿ ತೇಜಸ್ವಿನಿ ಮಾತನಾಡಿ, ನಮ್ಮ ತಾಯಿಯ ತವರೂರು ಜೋಗ್ ಫಾಲ್ಸ್ ಆಗಿದ್ದು, ಇಲ್ಲಿನ ಚಾಮುಂಡೇಶ್ವರಿ ದೇವಿಯ ಸನ್ನಿದಾನದಲ್ಲಿ ನನಗೆ ಸೇವೆ ಸಲ್ಲಿಸುವ ಯೋಗ ಬಂದಿದೆ. ಮೈಸೂರು ನಾಡದೇವತೆ ಚಾಮುಂಡೇಶ್ವರಿಗೂ ಇಲ್ಲಿನ ದ್ವಿಮುಖ ಚಾಮುಂಡೇಶ್ವರಿಗೂ ಅವಿನಾವಭಾವ ಸಂಬಂಧವಿದೆ ಎಂದರು.
ಸಂಗೀತದಿಂದ ಮನುಷ್ಯನ ಉದ್ವೇಗ ದೂರಾಗಿ ಮನುಷ್ಯನ ದೃಢತೆ ಹೆಚ್ಚಿ ಆರೋಗ್ಯ ವೃದ್ಧಿಸುವುದು ಎಂದರು. ಪಕ್ಕವಾದ್ಯದಲ್ಲಿ ವಿದ್ವಾನ್ ಕುಮಾರ್ ಜಿ.ಎಸ್. ಮೃದಂಗ, ವಿದ್ವಾನ್ ಶಾಂತಕುಮಾರ್ ವಯೋಲಿನ್‌ನಲ್ಲಿ ಸಹಕಾರ ನೀಡಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ಸಂಗೀತಾಸಕ್ತರು ಸಂಗೀತ ಲೋಕದಲ್ಲಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement