12ರಂದು ರೈತ ಸಂಘ ಪ್ರತಿಭಟನೆ
ಭದ್ರಾವತಿ: ಭದ್ರಾವತಿ ತಾಲೂಕು ಕಚೇರಿಯಲ್ಲಿನ ಭ್ರಷ್ಟಾಚಾರ ವಿರೋಧಿಸಿ, ಪಿಎಲ್ಡಿ ಬ್ಯಾಂಕಿನವರು ರೈತರಿಗೆ ಕೊಡುತ್ತಿರುವ ಕಿರುಕುಳ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯು ಮಾ. 12ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಖಜಾಂಚಿ ಬಿ.ಎಂ. ಚಿಕ್ಕಸ್ವಾಮಿ, ಮುಖಂಡ ಕಡಿದಾಳ್ ಶಾಮಣ್ಣ, ಹಸಿರುಸೇನೆ ರಾಜ್ಯ ಸಂಚಾಲಕ ಎನ್.ಎಸ್. ಸುದಾಂಶು, ಜಿಲ್ಲಾಧ್ಯಕ್ಷ ಟಿ.ಎಂ. ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಶಿವಮೂರ್ತಿ ಇತರರು ಭಾಗವಹಿಸಲಿದ್ದಾರೆ.