ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಲ್ಲ ವರ್ಗ ಒಗ್ಗೂಡಿಸುವ ಶಕ್ತಿ 'ಕೈ'ಗಿದೆ

Rashmi Kasaragodu
Updated On : 10 Mar 2014, 11:33 am

ಕ.ಪ್ರ.ವಾರ್ತೆ    ಶಿಕಾರಿಪುರ    ಮಾ. 9
ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದ ಜನತೆಯನ್ನು ಒಗ್ಗೂಡಿಸಿ ಸಮಾಜವನ್ನು ಸಂಘಟಿಸುವ ಸಿದ್ಧಾಂತವನ್ನು ಹೊಂದಿದೆ ಎಂದು ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ತಾಲೂಕಿನ ಪುನೇದಹಳ್ಳಿ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಏರಿದ ಕೇವಲ 9 ತಿಂಗಳಲ್ಲಿ ರೈತರ ಸಾಲಮನ್ನಾ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಕ್ಷೀರಭಾಗ್ಯ,ಅನ್ನಭಾಗ್ಯ ಸಹಿತ 15000 ಕೋಟಿಯ ವಿವಿಧ ಯೋಜನೆ ಎಲ್ಲಾ ವರ್ಗದ ಜನತೆಗೆ ಜಾರಿಗೊಳಿಸಿ ಜನಸಾಮಾನ್ಯರ ಕಣ್ಣೀರು ಒರೆಸುವ ಪ್ರಾಮಾಣಿಕ ಕಾರ್ಯ ಕೈಗೊಂಡಿದ್ದಾಗಿ ತಿಳಿಸಿದರು.
ಮೋದಿ ಪಿಎಂ ಅಸಾಧ್ಯ:  ಕಳೆದ 5 ವರ್ಷ ರಾಜ್ಯವನ್ನಾಳಿದ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಅತ್ಯಾಚಾರ, ಕೋಮುವಾದ ಹೆಚ್ಚಳಕ್ಕೆ ಕಾರಣವಾಗಿದೆ. ಚಿನ್ನದ ಕುರ್ಚಿಯ ಸರದಾರನಾಗಿ ಮೆರೆದು ಇದೀಗ ಜೈಲು ವಾಸ ಅನುಭವಿಸುತ್ತಿರುವ ಸಂದರ್ಭದಲ್ಲಿ ಶ್ರೀರಾಮುಲು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೇಶಾದ್ಯಂತ ನರೇಂದ್ರ ಮೋದಿ ಹವಾ ಕೃತಕವಾಗಿದೆ. ಎಂತಹ ಸಂದರ್ಭದಲ್ಲಿಯೂ ಮೋದಿ ಪ್ರಧಾನಮಂತ್ರಿ ಆಗಲು ಅಸಾಧ್ಯ ಎಂದರು.
ಜಾತ್ಯತೀತ ನಾಯಕ ಎಂದು ಸ್ವಘೋಷಿಸಿಕೊಂಡಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿಯನ್ನು ಗಂಗಾನದಿಯಲ್ಲಿ ತೇಲುತ್ತಿರುವ ಶವ ಎಂದಿದ್ದರು. ಇದೀಗ ಪಕ್ಷಕ್ಕೆ ವಾಪಸಾಗುವ ಮೂಲಕ ಅವರ ನಿಜಬಣ್ಣ ಗೋಚರವಾದಂತಾಗಿದೆ. ಇದೀಗ ಜನತೆಗೆ ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಸೂಕ್ತ ಉತ್ತರ ನೀಡಬೇಕಿದೆ:  ಶಿವಮೊಗ್ಗ ಶಾಸಕ ಪ್ರಸನ್ನಕುಮಾರ್ ಮಾತನಾಡಿ, ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಪಕ್ಷದ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಅಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಬಾರಿ ಕೇಂದ್ರದಲ್ಲಿ ಪುನಃ ಕಾಂಗ್ರೆಸ್ ನೇತೃತ್ವದ ಪಕ್ಷ ಅಧಿಕಾರದ ಗದ್ದುಗೆ ಏರುವುದು ಶತಸಿದ್ಧ ಎಂದರು.
ಬಿಜೆಪಿಯಿಂದ ಕೆಜೆಪಿ ಇದೀಗ ಕೆಜೆಪಿಯಿಂದ ಬಿಜೆಪಿಗೆ ಸ್ವಹಿತಾಸಕ್ತಿಗಾಗಿ ಪಕ್ಷ ಬದಲಾಯಿಸುತ್ತಿರುವ ರಾಜಕಾರಣಿಗಳಿಗೆ ಜನತೆ ಸೂಕ್ತ ಉತ್ತರವನ್ನು ಈ ಬಾರಿ ನೀಡಬೇಕಾಗಿದೆ ಎಂದರು.
ಈ ಸಂದರ್ಭ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ನಗರದ ಮಹಾದೇವಪ್ಪ, ಮಾಜಿ ಶಾಸಕ ಕರಿಯಣ್ಣ, ನಗರಾದ್ಯಕ್ಷ ಮಾಲತೇಶೆ ಗೋಣಿ, ಜಿ.ಪಂ. ಸದಸ್ಯ ಈಸೂರು ಬಸವರಾಜ್, ನಗರ ಯುವ ಘಟಕದ ಅಧ್ಯಕ್ಷ ಭಂಡಾರಿ ಮಾಲತೇಶ್, ಕಾರ್ಯದರ್ಶಿ ಸುಧೀರ್, ರಾಘು, ನರಸಿಂಗನಾಯ್ಕ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ವಾಹೀದ್ ಅಡ್ಡು, ಮುಖಂಡ ಕಲಗೋಡು ರತ್ನಾಕರ್, ತೀ.ನಾ ಶ್ರೀನಿವಾಸ್, ಕಟ್ಟಿಗೆಹಳ್ಳ ರಘುಪತಿ, ಬಡಗಿ ಪಾಲಾಕ್ಷ, ಎಸ್.ಪಿ. ದಿನೇಶ್, ಹೇಮರಾಜ್, ಜಾಫರ್ ಅಲಿ, ಕುಮಾರನಾಯ್ಕ, ಶಿವುನಾಯ್ಕ, ಸುರೇಶ್ ಧಾರವಾಡ, ಕಣಿವೆಮನೆ ಅರುಣ್, ವಿಜಯಲಕ್ಷ್ಮಿ ಪಾಟೀಲ್ ಮತ್ತಿತರರು ಹಾಜರಿದ್ದರು.




ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಬಡವರಿಗೆ ಒಂದು ರು.ಗೆ ಕೆಜಿ ಅಕ್ಕಿ, ನಂತರ ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರ ಸಾಲಮನ್ನಾ, ಆಶ್ರಯ ಯೋಜನೆ ಸಾಲಮನ್ನಾ, ಭಾಗ್ಯಜ್ಯೋತಿ ಸಾಲಮನ್ನಾ, ಮಾಡಿದ್ದಲ್ಲದೆ ರೈತರಿಗೆ ಬಡ್ಡಿರಹಿತ ಸಾಲ ಕೊಡುವ ಯೋಜನೆ ಜಾರಿಗೆ ತಂದಿದ್ದಾರೆ.
- ಕಿಮ್ಮನೆ ರತ್ನಾಕರ್, ಶಿಕ್ಷಣ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement