ರೂಪ್ಕುಂಡ್ಗೆ ಚಾರಣ
ಶಿವಮೊಗ್ಗ: ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ತರುಣೋದಯ ಘಟಕವು ಮೇ 6ರಿಂದ 29ರ ವರೆಗೆ ದೆಹಲಿಯ ನೈನಿತಾಲ್ ಸಮೀಪ ಇರುವ ಚಾರಣಿಗರಿಗೆ ಸವಾಲಾಗಿರುವ ಅತ್ಯಂತ ಸುಂದರವಾದ ಸ್ಥಳ ರೂಪ್ ಕುಂಡ್ಗೆ ರಾಷ್ಟ್ರೀಯ ಚಾರಣ ಹಮ್ಮಿಕೊಂಡಿದೆ.
ಚಾರಣದ ಶುಲ್ಕ ಒಬ್ಬರಿಗೆ 10 ಸಾವಿರ, (ಪ್ರಯಾಣ ವೆಚ್ಚ ಹೊರತುಪಡಿಸಿ) ನಿಗದಿಪಡಿಸಲಾಗಿದ್ದು ಆಸಕ್ತ ಚಾರಣಿಗರು ಮಾ.12ರೊಳಗೆ ಯೂತ್ ಹಾಸ್ಟೆಲ್ ಜಿ. ವಿಜಯಕುಮಾರ್ ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು (ಮೊ- 9448105198) ಎಂದು ಘಟಕದ ಅಧ್ಯಕ್ಷ ಅ.ನಾ. ವಿಜಯೇಂದ್ರ ರಾವ್ ತಿಳಿಸಿದ್ದಾರೆ.