ಸಮಿತಿ ರಚನೆ
ಶಿವಮೊಗ್ಗ: ಕರ್ನಾಟಕ ದಲಿತ ನೌಕರರ ಒಕ್ಕೂಟದ ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಎಂ.ರುದ್ರಪ್ಪ (ಶಿಕ್ಷಣ ಇಲಾಖೆ) ಆಯ್ಕೆಯಾಗಿದ್ದಾರೆ. ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸಿ.ಜಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಕೆ.ಬಿ.ಜುಂಜ್ಯಾನಾಯ್ಕ, ಎಸ್.ಎನ್. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಖಜಾಂಚಿ ಆರ್.ನಂಜುಂಡಪ್ಪ, ಸಹ ಕಾರ್ಯದರ್ಶಿ ಗಂಗನರಸಯ್ಯ ಮತ್ತಿತರರು ಇದ್ದರು. ತಾಲೂಕು ಶಾಖೆ ಗೌರವಾಧ್ಯಕ್ಷರಾಗಿ ಎನ್.ಕದರಪ್ಪ, ಉಪಾಧ್ಯಕ್ಷರಾಗಿ ಕವಿತ, ಸುಮಂತ್, ಪ್ರಧಾನ ಕಾರ್ಯದರ್ಶಿಯಾಗಿ ರಘುನಂದನ್, ಸುಧೀಂದ್ರ, ಮಂಜಪ್ಪ, ಖಜಾಂಚಿಯಾಗಿ ಜಯಮ್ಮ, ಸಂಘಟನಾ ಕಾರ್ಯದರ್ಶಿಯಾಗಿ ಕಾಳಾನಾಯ್ಕ, ಪುಷ್ಪಾ, ಮೋಹನ್ ರಾವ್ ಆಯ್ಕೆಯಾದರೆಂದು ಒಕ್ಕೂಟ ತಿಳಿಸಿದೆ.
ಜೆಎನ್ಎನ್ಸಿಇಯಲ್ಲಿ ಕ್ಯಾಂಪಸ್ ಆಯ್ಕೆ
ಶಿವಮೊಗ್ಗ: ಇಲ್ಲಿನ ಜವಾಹರಲಾಲ್ ನೆಹರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಅಂತಿಮ ವರ್ಷದ 30 ವಿದ್ಯಾರ್ಥಿಗಳು ಟೆಕ್ ಮಹೀರ, ಗ್ಲೋಬಲ್ ಎಡ್ಜ್, ಫೇಸ್ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಉಚಿತ ಸ್ವ ಉದ್ಯೋಗ ತರಬೇತಿ
ಶಿವಮೊಗ್ಗ: ಹೊಳಲೂರಿನ ಕೆನರಾ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆಯು ವಿವಿಧ ತರಬೇತಿ ಶಿಬಿರವನ್ನು ನಡೆಸಲಿದೆ. ಹೈನುಗಾರಿಕೆ ಮತ್ತು ವರ್ಮಿ ಕಾಂಪೋಸ್ಟ್, ಕುರಿ ಸಾಕಣೆ, ತೋಟಗಾರಿಕೆ ಬೆಳೆಗಳ ಬಗ್ಗೆ, ವಿದ್ಯುತ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್ಸೆಟ್ ದುರಸ್ತಿ, ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ, ರೆಫ್ರಿಜರೇಟರ್ ಮತ್ತು ಏರ್ಕಂಡೀಷನರ್ ರಿಪೇರಿ, ಟ್ರ್ಯಾಕ್ಟರ್ ಅಂಡ್ ಪವರ್ ಟಿಲ್ಲರ್ ದ್ವಿಚಕ್ರ ವಾಹನ ಸರ್ವಿಸಿಂಗ್ ನಿರ್ವಹಣೆ ಮತ್ತು ರಿಪೇರಿ, ಮಲ್ಟಿ ಫೋನ್ ಸರ್ವಿಸಿಂಗ್, ಕಂಪ್ಯೂಟರ್ ಬೇಸಿಕ್ ಮತ್ತು ನೆಟ್ವರ್ಕಿಂಗ್, ಬ್ಯೂಟಿಪಾರ್ಲರ್, ಪ್ಲಂಬಿಂಗ್ ಮತ್ತು ಸ್ಯಾನಿಟರಿ ವರ್ಕ್ಸ್, ಫೋಟೋಗ್ರಫಿ, ಆಹಾರ ಸಂಸ್ಕರಣೆ, ಬೇಕರಿ ಉತ್ಪನ್ನಗಳ ತಯಾರಿಕೆ, ಗೃಹೋಪಯೋಗಿ ವಸ್ತುಗಳ ತಯಾರಿಕೆ, ಸಿದ್ಧ ಉಡುಪುಗಳ ತಯಾರಿಕೆ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಆಸಕ್ತರು ತಮ್ಮ ಹೆಸರು ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಬಹುದು. ಮಾಹಿತಿಗೆ ಮೊ. 9538271653.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.