ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಪರ ಡಿಸಿ ಶ್ರೀರಂಗಯ್ಯಗೆ ಬೀಳ್ಕೊಡುಗೆ

Lingaraj Badiger
Updated On : 11 Mar 2014, 11:10 am

ಶಿವಮೊಗ್ಗ: ಅಪರ ಜಿಲ್ಲಾಧಿಕಾರಿಯವರಿಗೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಶ್ರೀರಂಗಯ್ಯ ಅವರು ಚಿತ್ರದುರ್ಗಕ್ಕೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಆಯೋಜನೆಗೊಂಡ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಡಿಎಲ್ ಆರ್ ಗಡದ್‌ಕರ್, ಶ್ರೀರಂಗಯ್ಯನವರು ಉತ್ತಮ ಆಡಳಿತಗಾರ, ನಿಗರ್ವಿ, ಸದಾ ಹಸನ್ಮುಖಿ, ಅಧಿಕಾರವಾಣಿಯಿಂದ ಎಂದೂ ಮಾತನಾಡದ ಅಪರೂಪದ ವ್ಯಕ್ತಿ. ಎಲ್ಲಾ ಅಧಿಕಾರಿಗಳ ಸೌಹಾರ್ದಯುತ ಕೊಂಡಿಯಾಗಿದ್ದರು ಎಂದು ಬಣ್ಣಿಸಿದರು.
ರಾಜಪ್ಪ ಮಾತನಾಡಿ, ಶ್ರೀರಂಗಯ್ಯ ಅವರು ಸಾಗರದಲ್ಲಿ ಗೊಬ್ಬರ ಗಲಾಟೆಯನ್ನು ಅತ್ಯಂತ ಸಂಯಮದಿಂದ ನಿರ್ವಹಿಸಿದರು. ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರ ಶಿಕಾರಿಪುರದಲ್ಲಿ ಸಹ ಅವರು ಸಾಂದರ್ಭಿಕವಾಗಿ ಮತ್ತು ಆಡಳಿತಾತ್ಮಕ ಚಾಕಚಕ್ಯತೆ ಮೂಲಕ ನಿಭಾಯಿಸಿದರು ಎಂದು ಹೇಳಿದರು.
ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಉಪವಿಭಾಗಾಧಿಕಾರಿ ಕುಸುಮ, ರಮೇಶ್, ಸಮನ್ವಯ ಸಂಸ್ಥೆಯ ಕಾಶಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement