ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆದೇಶ ಹಿಂಪಡೆದ ಕ್ರಮಕ್ಕೆ ಸ್ವಾಗತ

Lingaraj Badiger
Updated On : 11 Mar 2014, 11:10 am

ಶಿವಮೊಗ್ಗ: ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಮಾರ್ಚ್ 4ರಂದು ಕಾಲ್ಪನಿಕ ವೇತನ, ಬಡ್ತಿ, ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶವನ್ನು ಸೋಮವಾರ ಹಿಂಪಡೆದಿದ್ದು, ಇದನ್ನು ಶಿವಮೊಗ್ಗ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಂಘ ಸ್ವಾಗತಿಸಿದೆ.
ಫೆಬ್ರವರಿ 12ರಂದು ರಾಜ್ಯ ಪತ್ರಕ್ಕೆ ಪೂರಕವಾಗಿ ಹೊರಡಿಸಿದ್ದ ಈ ಆದೇಶ ನೌಕರರಿಗೆ ಮರಣಶಾಸನವಾಗಿತ್ತು. ಇದನ್ನು ತಕ್ಷಣ ವಾಪಸ್ ಪಡೆಯಬೇಕೆಂದು ಸಂಘದ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಸಭಾಪತಿ ಡಿ.ಎಚ್. ಶಂಕರಮೂರ್ತಿಯವರ ಮಾರ್ಗದರ್ಶನದಲ್ಲಿ ಶಿಕ್ಷಕ ಕ್ಷೇತ್ರದ ಶಾಸಕ ಕ್ಯಾಷ್ಟನ್ ಗಣೇಶ್ ಕಾರ್ಣಿಕ್, ಡಾ. ಶಿವಯೋಗಿಸ್ವಾವು, ಅರುಣ್ ಷಾಪೂರ್ ಮತ್ತು ವೈ.ಎ. ನಾರಾಯಣಸ್ವಾಮಿ ಅವರನ್ನೊಳಗೊಂಡ ನಿಯೋಗ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರನ್ನು ಭೇಟಿ ಮಾಡಿ ಪ್ರಸ್ತುತ ಹೊರಡಿಸಿದ್ದ ಆದೇಶದಿಂದ ಕಾಲೇಜು ಸಿಬ್ಬಂದಿಗೆ ಆಗುವ ತೊಂದರೆ ಮನವರಿಕೆ ಮಾಡಿಕೊಟ್ಟಿತ್ತು. ತದನಂತರ ಗೋಯಲ್ ಅವರು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ನಂದಕುಮಾರ್ ಅವರಿಗೆ ಸೂಚನೆ ನೀಡಿ ತಕ್ಷಣದಿಂದಲೇ ತಾತ್ಕಾಲಿಕವಾಗಿ ಆದೇಶ ಹಿಮ್ಮಪಡಿಯುವಂತೆ ಸೂಚಿಸಿದ್ದಾರೆ.
ಇದರಿಂದ ಅನುದಾನಿತ ಕಾಲೇಜುಗಳ ಸಿಬ್ಬಂದಿ ಕೊಂಚ ನಿಟ್ಟುಸಿರು ಬಿಡುವಂತಾಗಿದ್ದು, ಆದೇಶ ಹಿಂಪಡೆಯುವಲ್ಲಿ ಶ್ರಮಿಸಿದ ಜನಪ್ರತಿನಿಧಿಗಳನ್ನು ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಹೆಗಡೆ ಮತ್ತು ಅಧ್ಯಕ್ಷ ಡಾ. ಕೆ.ಎಚ್. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement