ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅನಂತರಾಮ್ ಕೊಳಲು ವಾದನ

Rashmi Kasaragodu
Updated On : 13 Mar 2014, 11:34 am

ಶಿವಮೊಗ್ಗ: ಸೌರಭ ಸಂಸ್ಥೆಯು ಹಮ್ಮಿಕೊಂಡ ವಾರ ಕಾಲದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳವಾರ ಬಿ.ಕೆ. ಅನಂತರಾಮ್ ಅವರ ಕೊಳಲು ವಾದನ ಪ್ರಸ್ತುತಗೊಂಡಿತು.
ತಮ್ಮ ಚಾಕಚಕ್ಯತೆಯಿಂದ ಕೇಳುಗರು ಮಂತ್ರ ಮುಗ್ಧರಾಗುವಂತೆ ಮಾಡಿದ ಅನಂತರಾಮ್ ಅವರ ಕಾರ್ಯಕ್ರಮ ಜನಮೆಚ್ಚುಗೆ ಗಳಿಸಿತು.
ಇದೇ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂಡಳಿಯಿವರಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು. ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಕಲಾವಿದರನ್ನು ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ವಿಶ್ವನಾಥ ಕಾಶಿ ಹಾಗೂ ಸೌರಭ ಸಂಸ್ಥೆಯ ಸದಸ್ಯರಾದದ ಸುರೇಶ್, ನಂದಿನಿ, ಕಾವೇರಮ್ಮ, ಮಾಧು, ಉಪದ್ಯಾಯ ಇತರರು ಉಪಸ್ಥಿತರಿದ್ದರು.
ಯಕ್ಷಗಾನ: ಎಡನೀರಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯವರು 13ರಂದು ಓಂ ನಮಃ ಶಿವಾಯ ಯಕ್ಷಗಾನ ಪ್ರಸ್ತುತಪಡಿಸುವರು. ಮಾ.14ರಂದು ಮೋಹಿನಿ ಭಸ್ಮಾಸುರ, ಮಾ.15ರಂದು ಮಹಿಷಾಸುರ ಮರ್ಧಿನಿ ಪ್ರಸಂಗಗಳು ಇದೇ ವೇದಿಕೆಯಲ್ಲಿ ಯಕ್ಷಗಾನ ಪ್ರಿಯರಿಗೆ ರಸದೌತಣ ನೀಡಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement