ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಯನೂರಿನಲ್ಲಿ ಕರ್ನಾಟಕ ಬ್ಯಾಂಕ್ ಉದ್ಘಾಟನೆ

Rashmi Kasaragodu
Updated On : 13 Mar 2014, 11:34 am

ಆಯನೂರು: ಮಾರ್ಚ್ ಅಂತ್ಯದೊಳಗೆ ದೇಶದಲ್ಲಿ ಕರ್ನಾಟಕ ಬ್ಯಾಂಕ್ ಶಾಖೆಯ ಸಂಖ್ಯೆ 600 ಮುಟ್ಟಲಿದೆ. ಅದೇ ರೀತಿ ಎಟಿಎಂಗಳೂ ಸಹ ವಿವಿಧ ಆರಂಭಿಸಲಾಗುತ್ತಿದೆ ಎಂದು ಕರ್ನಾಟಕ ಬ್ಯಾಂಕಿನ ಕರ್ನಾಟಕ ಬ್ಯಾಂಕ್ ಕೇಂದ್ರ ಕಚೇರಿಯ ಮಹಾಪ್ರಬಂಧಕ ಪಿ. ಜಯರಾಂ ಹಂದೆ ಹೇಳಿದ್ದಾರೆ.
ಆಯನೂರಿನಲ್ಲಿ ಶಾಖಾ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದ್ದು ಜನ ಸಾಮಾನ್ಯರ ಅಪೇಕ್ಷೆಯನ್ನು ಪೂರೈಸುತ್ತಿದೆ ಎಂದು ಹೇಳಿದರು.
ಇದು ರೈತರ ಬ್ಯಾಂಕ್ ಆಗಿದ್ದು, ರೈತರ ನೆರವಿಗೆ ಸಹಕಾರ ನೀಡುತ್ತಾ ಬಂದಿದೆ. 110 ಶಾಖೆಗಳು ಗ್ರಾಮಾಂತರ ಪ್ರದೇಶದಲ್ಲೇ ಇದೆ. ರೈತರಿಗೆ ಕಾಳಜಿ ನೀಡುವ ಉದ್ದೇಶದಿಂದ ಕಾರ್ಯೋನ್ಮುಖವಾಗಿದೆ ಎಂದರು.
ಕರ್ನಾಟಕ ಬ್ಯಾಂಕ್ ಶಿವಮೊಗ್ಗ ವೃತ್ತ ಮಹಾಪ್ರಬಂಧಕ ರಂಗನಾಥ್ ಮಾತನಾಡಿ, ಕರ್ನಾಟಕ ಬ್ಯಾಂಕು ಆರಂಭಗೊಂಡು ತನ್ನ 90 ವರ್ಷದ ಅವಧಿಯಲ್ಲಿ ಪ್ರಗತಿ ಸಾಧಿಸುತ್ತಾ ದೇಶದಲ್ಲಿ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಮುಂಚೂಣಿಯಲ್ಲಿದೆ. 2013ರ ಡಿಸೆಂಬರ್ ಅಂತ್ಯಕ್ಕೆ 229.82 ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಒಟ್ಟು ವಹಿವಾಟು 66547 ಕೋಟಿಯಾಗಿದ್ದು, ದೇಶದಲ್ಲಿ ಈ ವರೆಗೆ 566 ಶಾಖೆ ಹಾಗೂ 653 ಎಟಿಎಂ ಹೊಂದಿದೆ. 116000ಕ್ಕೂ ಹೆಚ್ಚು ಷೇರುದಾರರು 7 ದಶಲಕ್ಷಕಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದು ಅಂಕಿ ಅಂಶ ನೀಡಿದರು.
ಮರುಪಾವತಿದಾರರ ಬೆಳೆಸಾಲದ ಮೇಲೆ ಶೇ.4ರ ಬಡ್ಡಿ ದರದ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಬ್ಯಾಂಕಿನ ಆಧುನಿಕ ತಂತ್ರಜ್ಞಾನದ ಅಳವಡಿಕೆ, ಸಮರ್ಪಕ ನಿರ್ವಹಣೆ ಸಾಮಾಜಿಕ ಬದ್ಧತೆ, ಉತ್ತಮ ಗ್ರಾಹಕ ಸೇವೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ಇವುಗಳಲ್ಲಿ 2012-13 ಸಾಲಿನಲ್ಲಿ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನದ ಅಪಾಯ ನಿರ್ವಹಣೆ ಮತ್ತು ವ್ಯವಹಾರ ಆವಿಷ್ಕಾರದಲ್ಲಿ ಮಾಹಿತಿ ತಂತ್ರಜ್ಞಾನದ ಅಳವಡಿಕೆಗಾಗಿ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಪಾತ್ರವಾಗಿರುವುದು ಬಹಳ ಹೆಮ್ಮೆ ಎಂದು ಹೇಳಿದರು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಆಯೋಜಿಸಿದ್ದ ಸಂಡೆ ಸ್ಟ್ಯಾಂಡರ್ಡ್ ಫಿನ್‌ವಿಜ್ 2013 ಉತ್ತಮ ಬ್ಯಾಂಕರ್ ಪ್ರಶಸ್ತಿ ಪೈಕಿ ಮೂರು ಬಹುಮಾನಗಳು ನಮ್ಮ ಬ್ಯಾಂಕಿಗೆ ಲಭಿಸಿರುವುದು ಹೆಮ್ಮೆ ತಂದಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement