ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎನ್‌ಸಿಪಿ ಧೂಮ್-2014

Rashmi Kasaragodu
Updated On : 13 Mar 2014, 11:34 am

ಶಿವಮೊಗ್ಗ: ನ್ಯಾಷನಲ್ ಕಾಲೇಜ್ ಆಫ್ ಫಾರ್ಮಸಿ ಕುವೆಂಪು ರಂಗಮಂದಿರದಲ್ಲಿ ಎನ್‌ಸಿಪಿ ಧೂಮ್-2014 ವಾರ್ಷಿಕೋತ್ಸವ ಸಮಾರಂಭವನ್ನು ಬುಧವಾರ ಹಮ್ಮಿಕೊಂಡಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವೃತ್ತಿಯಲ್ಲಿ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಫಾರ್ಮಸಿ ವೃತ್ತಿ ಬಾಂಧವರು ಬಡ ಜನತೆಗೆ ಕೈಗೆಟುಕುವ ವೈದ್ಯರಿದ್ದಂತೆ ಎಂಬ ಪ್ರತೀತಿ ಇದೆ. ಈ ನಿಟ್ಟಿನಲ್ಲಿ ಸೇವೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಪ್ರಾಂಶುಪಾಲ ಡಾ. ಜೆ. ಕುಪ್ಪಸ್ ಅಧ್ಯಕ್ಷತೆ ವಹಿಸಿದ್ದರು. ಎನ್.ಟಿ. ನಾರಾಯಣ, ಮಲ್ಲಪ್ಪ, ಆರ್. ರವೀಂದ್ರ, ಅಶ್ವತ್ಥನಾರಾಯಣ, ವಿಜಯಕುಮಾರ್, ಎಸ್.ಎಂ. ಪ್ರಸನ್ನ, ಶ್ರೀನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement