ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗಣಪತಿಗೆ ವಿಶ್ವಕರ್ಮ ಸಹಕಾರ ಸಂಘದ ಸನ್ಮಾನ

Rashmi Kasaragodu
Updated On : 13 Mar 2014, 11:36 am

ತೀರ್ಥಹಳ್ಳಿ: ಕರ್ನಾಟಕ ಜಾನಪದ ಯಕ್ಷಗಾನ ಕಲಾ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ಪತ್ರಕರ್ತ ಬಿ. ಗಣಪತಿ ಅವರನ್ನು  ವಿಶ್ವಕರ್ಮ ಸಹಕಾರ ಸಂಘ ಸನ್ಮಾನಿಸಿತು.   
ಪತ್ರಿಕಾರಂಗದಲ್ಲಿ  2 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿದ್ದು, ಜೊತೆಜೊತೆಗೆ ಕಲಾವಿದನಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಬಿ. ಗಣಪತಿ 'ಸಹ್ಯಾದ್ರಿ' ವಾರಪತ್ರಿಕೆ ಸಂಪಾದಕರಾಗಿ  ನಿರಂತರವಾಗಿ ಪತ್ರಿಕೆಯನ್ನು ಹೊರತಂದಿದ್ದಾರೆ. ಸಂಘದ  ಸದಸ್ಯ ಮಂಜಪ್ಪಾಚಾರ್ ಮಾತನಾಡಿದರು. ಸಂಘದ ಅಧ್ಯಕ್ಷ ಟಿ.ಜಿ.ವಿಶ್ವೇಶ್ವರ ಸನ್ಮಾನಿತರಿಗೆ ಶಾಲು ಹೊದಿಸಿ, ನೆನಪಿನಕಾಣಿಕೆ ನೀಡಿ  ಗೌರವಿಸಿದರು.  ನಿರ್ದೇಶಕರಾದ ಕೆ.ನಾಗರಾಜ್,  ಯೋಗೇಂದ್ರ,  ಶೋಭ   ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement