ಬಿಎಸ್ಎನ್ಎಲ್ ಪ್ಲಾನ್ ದರ ಏರಿಕೆ
ಶಿವಮೊಗ್ಗ: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿನ ಬಿ.ಎಸ್.ಎನ್.ಎಲ್.ನ ಸ್ಥಿರ ಮತ್ತು ನಿಸ್ತಂತು ದೂರವಾಣಿಯ ಚಂದಾದಾರಿಕೆಗೆ ಇದುವರೆಗೆ ಇದ್ದ ಕನಿಷ್ಠ ನಿಗದಿತ ತಿಂಗಳ ದರ (ಬಾಡಿಗೆ) ಕೊಂಚ ಏರಿಕೆಯಾಗಿದೆ. ಹಾಲಿ 180ನ್ನು 195 ರುಪಾಯಿಗೆ ಮತ್ತು ಮತ್ತು ಬಿ.ಬಿ.ಜಿ. ಎಫ್.ಎನ್. ಕಾಂಬೋ 600ಬ್ರಾಡ್ಬ್ಯಾಂಡ್ ಯೋಜನೆಯ ತಿಂಗಳ ದರವನ್ನು 630ಕ್ಕೆ ಹಾಗೂ ಇನ್ನಿತರ ನಿಯಮಿತ ಬಳಕೆ ಬ್ರಾಡ್ಬ್ಯಾಂಡ್ ಯೋಜನೆಯ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಸಲಾಗಿದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.
ಬದಲಾದ ದರವು ಮಾರ್ಚ್ 1ರಿಂದ ಅನ್ವಯವಾಗಲಿದೆ. ಈ ಬದಲಾವಣೆಯನ್ನು ಜಿಲ್ಲೆಯ ಎಲ್ಲಾ ಸ್ಥಿರ/ನಿಸ್ತಂತು ಗ್ರಾಹಕರು ಗಮನಿಸುವಂತೆ ಸೂಚಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಂತರ್ಜಾಲ ತಾಣ ಢಿಢಿಢಿ.ಛಿಡಟಿಟ.್ಛ್ಟ.್ಝಟಿನ್ನು ಅಥವಾ ವಾಣಿಜ್ಯ ಅಧಿಕಾರಿ, ಶಿವಮೊಗ್ಗ(08182 261247) ಅಥವಾ ಆಯಾ ತಾಲೂಕಿನ ಬಿ.ಎಸ್.ಎನ್.ಎಲ್.ನ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.