ಇಂದು ಕಿಡ್ನಿ ತಪಾಸಣಾ ಶಿಬಿರ
ಶಿವಮೊಗ್ಗ: ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ನಗರದ ಪಾರ್ಕ್ ಬಡಾವಣೆಯ ವಾತ್ಸಲ್ಯ ಆಸ್ಪತ್ರೆಯಲ್ಲಿ ಮಾ. 14ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿದೆ. ಮಧುಮೇಹ, ಮೂತ್ರಪಿಂಡ ಹರಳು, ಅಧಿಕ ರಕ್ತದೊತ್ತಡ, ಮೂತ್ರ ಸೊಂಕು, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮುಖ ಮತ್ತು ಕಾಲುಗಳಲ್ಲಿ ಬಾವು, ಉರಿ ಮೂತ್ರ, ಮೂತ್ರದಲ್ಲಿ ಪ್ರೋಟಿನ್ ವಿಸರ್ಜನೆ ಹಾಗೂ ಇನ್ನಿತರೆ ಸಮಸ್ಯೆ ಇರುವವರು ಶಿಬಿರದಲ್ಲಿ ಪಾಲ್ಗೊಂಡು ತಜ್ಞ ವೈದ್ಯ ಡಾ.ರವಿ ಅವರಿಂದ ಸಲಹೆ ಪಡೆಯಬಹುದಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ಶಿಬಿರದಲ್ಲಿ ಮೂತ್ರ ಪರೀಕ್ಷೆ, ಸಿರಮ್ ಕ್ರಿಯಟಿನ್ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಮಾಹಿತಿಗೆ ಆಸ್ಪತ್ರೆಯನ್ನು ಸಂಪರ್ಕಿಸಬಹುದೆಂದು ಸಾರ್ವಜನಿಕ ಸಂಪರ್ಕಾಧಿಕಾರಿ ಧೀರೇಂದ್ರ ಫಂಡರಿ ಕೋರಿದ್ದಾರೆ. ಸಂಪರ್ಕ ಸಂಖ್ಯೆ- 9844201082.