ಉದ್ಯೋಗಕ್ಕಾಗಿ 185 ಅಭ್ಯರ್ಥಿಗಳ ನೋಂದಣಿ
ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಫೆಬ್ರವರಿ- 2014ರ ಮಾಹೆಯಲ್ಲಿ ಜಿಲ್ಲೆಯ 132 ಪುರುಷರು ಹಾಗೂ 48 ಮಹಿಳೆಯರು ಸೇರಿದಂತೆ ಒಟ್ಟು 185 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಎಸ್ಸೆಸ್ಸೆಲ್ಸಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ 9, ಎಸ್ಸೆಸ್ಸೆಲ್ಸಿ ಹಾಗೂ ಪದವೀಧರರಲ್ಲದ 74, ಪದವೀಧರರು-27, ತಾಂತ್ರಿಕ ಪದವೀಧರರು-75 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಟ್ಟು 185 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.