ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಯಕತ್ವ ತರಬೇತಿ ಶಿಬಿರ

Rashmi Kasaragodu
Updated On : 14 Mar 2014, 11:27 am

ಶಿಕಾರಿಪುರ: ರಾಜಕಾರಣ ಕಲುಷಿತಗೊಂಡಿದ್ದು, ಭ್ರಷ್ಟಾಚಾರದಿಂದ ವ್ಯಾಪಕವಾಗಿರುವ ರಾಜಕಾರಣದ ಬಗ್ಗೆ ಎಲ್ಲರೂ ಅಸಹ್ಯ ಭಾವನೆ ವ್ಯಕ್ತಪಡಿಸುವಂತಾಗಿದೆ ಎಂದು ಶಿವಮೊಗ್ಗದ ಭಾರತ್ ಫೌಂಡೇಶನ್ ಮುಖ್ಯಸ್ಥ ಮಂಜುನಾಥ್ ಭಂಡಾರಿ ವಿಷಾದಿಸಿದರು.
ಪಟ್ಟಣದ ಗುರುಭವನದಲ್ಲಿ ನವಭಾರತ ನಿರ್ಮಾಣ ವೇದಿಕೆ ವತಿಯಿಂದ ಯುವಕರಿಗಾಗಿ ನಡೆದ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುವಪೀಳಿಗೆ ನಿರ್ದಿಷ್ಟ ಗುರಿಯ ಮೂಲಕ ಸಾಧನೆಯ ಶಿಖರವನ್ನೇರಲು ಪ್ರಯತ್ನಿಸಬೇಕು. ನಿರ್ದಿಷ್ಟ ಗುರಿಯಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಜತೆಗೆ ವೈಯಕ್ತಿಕ ಬೆಳವಣಿಗೆ ಸಾಧ್ಯ. ಕೇವಲ ಉದ್ಯಮಿಯಾಗಿ ಜಗತ್ತಿನ 80ಕ್ಕೂ ಅಧಿಕ ದೇಶಗಳಲ್ಲಿ ಸಂಚರಿಸಿ ಅಮೆರಿಕಾ ಮತ್ತಿತರ ದೇಶದ ರಾಷ್ಟ್ರಾಧ್ಯಕ್ಷರ ಸಮ್ಮುಖದಲ್ಲಿ ಪ್ರತಿಭೆ ಪ್ರದರ್ಶಿಸಲು ಆತ್ಮವಿಶ್ವಾಸದಿಂದ ಮಾತ್ರ ಸಾಧ್ಯವಾಯಿತು ಎಂದರು. ಕಲುಷಿತ ರಾಜಕಾರಣದ ಬಗ್ಗೆ ರಾಜಕಾರಣಿಗಳನ್ನು ನಿಂದಿಸದಂತೆ ತಿಳಿಸಿದ ಅವರು ಈ ಬಗ್ಗೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದ್ದು, ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಪ್ರಸಿದ್ದ ವ್ಯಕ್ತಿತ್ವ ತರಬೇತುದಾರ ಚೇತನ್‌ರಾಮ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೆ ನಿರ್ದಿಷ್ಟ ಗುರಿ ಅತ್ಯಗತ್ಯವಾಗಿದ್ದು, ವ್ಯಕ್ತಿತ್ವ ಬದಲಿಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದರು. ತರಬೇತುದಾರ ಅನಂತ್‌ಪ್ರಭು, ಪೂರ್ಣೇಶ್, ಮುಖಂಡ ಸುರೇಶ್, ವೇಣುಗೋಪಾಲ್, ನಗರದ ರವಿಕಿರಣ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement