ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಕ.ಪ್ರ.ವಾರ್ತೆ ಸೊರಬ ಮಾ. 13
ಇಲ್ಲಿನ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ಪಟ್ಟಣದಲ್ಲಿ ನಡೆಯಿತು.
ಒಟ್ಟು 11 ಸದಸ್ಯರಿರುವ ಪಪಂನ ಪ್ರಸಕ್ತ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಇತ್ತು. ಈ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಎಂ.ಡಿ. ಉಮೇಶ್, ಜೆಡಿಎಸ್ ಬೆಂಬಲಿತ ಪ್ರಶಾಂತ ಮೇಸ್ತ್ರಿ ಸ್ಪರ್ಧಿಸಿದ್ದರು.
ಅಂತಿಮವಾಗಿ 7 ಮತ ಪಡೆದ ಜೆಡಿಎಸ್ ಬೆಂಬಲಿತ ಪ್ರಶಾಂತ ಮೇಸ್ತ್ರಿ ಆಯ್ಕೆಯಾದರು. 2 ಮತ ಪಡೆದು ಉಮೇಶ್ ಪರಾಭವಗೊಂಡರು. ಪ.ಜಾ. ಮೀಸಲಾತಿ ಇದ್ದ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದು ನೇತ್ರಾವತಿ ಸ್ಥಾನ ಅಲಂಕರಿಸಿದರು. ಶಾಸಕ ಮಧು ಬಂಗಾರಪ್ಪ ಆಗಮಿಸಿದ್ದರು.
ಇದೇ ವೇಳೆ ಪಕ್ಷೇತರ ಪಪಂ ಅಭ್ಯರ್ಥಿಗಳಾದ ಡಿ.ಆರ್. ಶ್ರೀಧರ್ ಹಾಗೂ ಅವರ ಸೊಸೆ ರಂಜಿನಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಚುನಾವಣಾಧಿಕಾರಿ ತಹಸೀಲ್ದಾರ್ ತಿಪ್ಪೂರಾವ್, ಪಪಂ ಅಧಿಕಾರಿಗಳು ಇದ್ದರು.