ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಭಯೋತ್ಪಾದನೆ ತಡೆಯುವಲ್ಲಿ ಯುಪಿಎ ವಿಫಲ: ಆರೋಪ

Rashmi Kasaragodu
Updated On : 14 Mar 2014, 11:36 am

ಸಾಗರ: ದೇಶಾದ್ಯಂತ ಭಯೋತ್ಪಾದಕ, ನಕ್ಸಲ್ ಕೃತ್ಯ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರ ವಿದ್ರೋಹಕ ಚಟುವಟಿಕೆ ನಿಯಂತ್ರಿಸುವಲ್ಲಿ ಪೂರ್ಣ ವಿಫಲವಾಗಿದೆ ಎಂದು ನ್ಯಾಯವಾದಿ ಕೆ.ವಿ. ಪ್ರವೀಣಕುಮಾರ್ ದೂರಿದರು.
ಇಲ್ಲಿನ ಸಾಗರ ಹೋಟೆಲ್ ವೃತ್ತದಲ್ಲಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಛತ್ತೀಸಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ಕೃತ್ಯ ಖಂಡಿಸಿ, ಮೃತ ಯೋಧರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ನಗರಸಭೆ ಸದಸ್ಯ ಸಂತೋಷ್ ಆರ್. ಶೇಟ್ ಮಾತನಾಡಿ, ದೇಶವನ್ನು ಕಾಯುವ ಯೋಧರ ಜೀವಕ್ಕೆ ಬೆಲೆ ಇಲ್ಲದ ಸ್ಥಿತಿ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ. ಛತ್ತೀಸಗಡದದಲ್ಲಿ ನಕ್ಸಲರು ನಡೆಸಿದ ದಾಳಿಗೆ 20 ಯೋಧರು ಬಲಿಯಾಗಿದ್ದಾರೆ. 2010ರಲ್ಲಿ ಇದೇ ಪ್ರದೇಶದಲ್ಲಿ ನಕ್ಸಲರು 76 ಮಂದಿ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದರು. ನಂತರ ದಾಂತೇವಾಡದಲ್ಲಿ ಬಸ್‌ನಲ್ಲಿ ತೆರಳುತ್ತಿದ್ದ 40ಕ್ಕೂ ಹೆಚ್ಚು ಪೊಲೀಸರನ್ನು ನಕ್ಸಲರು ಬಲಿ ತೆಗೆದುಕೊಂಡಿದ್ದಾರೆ. ಪದೇ ಪದೇ ಇಂತಹ ಕೃತ್ಯ ನಡೆಯುತ್ತಿರುವುದು ಕಾನೂನು ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ ಎಂದರು.
ಎಬಿವಿಪಿಯ ಸುಧೀಂದ್ರ, ಶ್ರೀಕರ, ಗಣೇಶ್ ಗಟ್ಟಿ, ನಗರಸಭೆ ಸದಸ್ಯ ಅರವಿಂದ ರಾಯ್ಕರ್, ಪ್ರಮುಖರಾದ ಪುರುಷೋತ್ತಮ, ಉಮಾ ಸಕ್ರೆ, ರತ್ನಾಕರ ಶೇಟ್, ರಾಜು ಬಿ. ಮಡಿವಾಳ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement