ಚುನಾವಣೆ ನಿರ್ವಹಣೆಗೆ ತಂಡ
ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಮಾದರಿ ನೀತಿ ಸಂಹಿತೆ ತಂಡ, ಸಹಾಯಕ ಖರ್ಚು ವೆಚ್ಚಗಳ ವೀಕ್ಷಕರ ತಂಡ, ವಿಧಾನಸಭಾ ಕ್ಷೇತ್ರಕ್ಕೆ ಎರಡು ವಿಡಿಯೋ ಕಣ್ಗಾವಲು ಮತ್ತು ಅವಲೋಕನ ತಂಡ ರಚಿಸಲಾಗಿದೆ. ಅದೇ ರೀತಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಕೌಂಟಿಂಗ್ ತಂಡ, ಎಂಸಿಎಂಸಿ ಲೈಸನಿಂಗ್ ಅಧಿಕಾರಿ ನೇಮಿಸಲಾಗಿದೆ ಎಂದು ಹೇಳಿದರು.
ನೀತಿ ಸಂಹಿತೆ ಉಲ್ಲಂಘನೆ ತಡೆಯುವುದು ಮತ್ತು ಪಾರದರ್ಶಕತೆಯಿಂದ ಚುನಾವಣೆ ನಡೆಸುವ ಉದ್ದೇಶದಿಂದ 38 ಜಾಗೃತಿ ದಳ ರಚಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಐದು ತಂಡ, ಭದ್ರಾವತಿಯಲ್ಲಿ 3, ಶಿವಮೊಗ್ಗದಲ್ಲಿ 4, ತೀರ್ಥಹಳ್ಳಿಯಲ್ಲಿ 8, ಶಿಕಾರಿಪುರ 5, ಸೊರಬದಲ್ಲಿ 6, ಸಾಗರದಲ್ಲಿ 7 ಜಾಗೃತ ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮತದಾನ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಹಾಗೂ ಮತದಾನ ಪೂರ್ವ ದಿನ ಮತ್ತು ಮತದಾನದ ದಿನ ಚುನಾವಣಾ ಕಾರ್ಯ ನಿರ್ವಹಿಸಲು 141 ತಂಡ ರಚಿಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು 29 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಲಾಗಿದೆ. ಈವರೆಗೆ ಜಿಲ್ಲಾ ಕಂಟ್ರೋಲ್ ರೂಂನಲ್ಲಿ 6 ದೂರುಗಳು ದಾಖಲಿಸಿದ್ದು, ಇದರಲ್ಲಿ 5 ದೂರು ವಿಲೇವಾರಿಯಾಗಿದ್ದು, ಒಂದು ದೂರು ವಿಲೇವಾರಿಯಾಗಲು ಬಾಕಿ ಇದೆ ಎಂದು ವಿವರಿಸಿದರು.