ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಧರ್ಮ, ಕೀರ್ತಿ ಶಾಶ್ವತ: ಶ್ರೀ

Rashmi Kasaragodu
Updated On : 18 Mar 2014, 11:41 am

ಕ.ಪ್ರ.ವಾರ್ತೆ, ಸೊರಬ, ಮಾ.17
ಎಲ್ಲ ಬಂಧನಗಳ ನಡುವಿನ ಹೋರಾಟದ ಬದುಕಿನಲ್ಲಿ ಶಾಂತಿ, ನೆಮ್ಮದಿ ದೊರಕುವುದು ಅನುಭವ ಮಂಟಪದ ವಿಚಾರಧಾರೆಗಳಿಂದ ಮಾತ್ರ ಸಾಧ್ಯ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತಶ್ರೀಗಳು ತಿಳಿಸಿದರು.
ಪಟ್ಟಣದ ಮುರುಘಾಮಠದಲ್ಲಿ ಕುಮಾರಪ್ರಭು ಸೇವಾ ಟ್ರಸ್ಟ್ ಜಡೆ ಸಂಸ್ಥಾನ ಮಠದ ವತಿಯಿಂದ ಹೋಳಿಹುಣ್ಣಿಮೆ ಪ್ರಯುಕ್ತ ನಡೆದ 94ನೇ ಶಿವಾನುಭವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀಚನ ನೀಡಿದರು.
ಮಾನವೀಯ ಮೌಲ್ಯಗಳು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಧರ್ಮ ಮತ್ತು ಕೀರ್ತಿಗಳೆರಡೇ ಶಾಶ್ವತ ಎಂಬುದನ್ನು ಮರೆಯಬಾರದು. ಗುರುವಚನ, ಗುರು ಸಾನ್ನಿಧ್ಯಗಳು ಬದುಕಿನಲ್ಲಿ ಸಂಸ್ಕಾರ ನೀಡುವಲ್ಲಿ ಮುಖ್ಯವಾಗುತ್ತಿದೆ. ಸಂಸ್ಕಾರಯುತ ಮಾನವ ದೇವಮಾನವನಾಗಲು ಸಾಧ್ಯ ಎಂದರು.
ಮನಸ್ಸಿನ ಆಸೆ-ವಾಂಛೆಗಳಿಗೆ ಕೊನೆಯೆಂಬುದೇ ಇಲ್ಲ. ನಿರೀಕ್ಷಿತ ಬೇಡಿಕೆಗಳಿಗೆ ತೃಪ್ತಿ ದೊರಕುವುದು ಕಷ್ಟಸಾಧ್ಯ. ಶ್ರದ್ಧಾಭಕ್ತಿ, ದಾಸೋಹವೆಂಬ ಅಸ್ತ್ರಗಳೇ ತೃಪ್ತಿಗೆ ಮಾರ್ಗಗಳು ಎಂದರು. ಈ ವೇಳೆ ಮೂಡಿ ವಿಮಲ ರಾಜಶೇಖರಗೌಡ ಮನೆತನದವರಿಂದ ಲಿಂ.ಕಾಳಮ್ಮ ಅವರ ಸ್ಮರಣಾರ್ಥ ದಾಸೋಹ, ಗಾನಗಂಗೋತ್ರಿ ಸಂಗೀತ ಪಾಠಶಾಲೆಯ ಲಕ್ಷ್ಮೀಮುರುಳೀಧರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಷಣ್ಮುಖಾಚಾರ್, ಶಾಂತಮ್ಮ, ರೇಣುಕಮ್ಮ, ಮಂಗಳಗೌರಿ, ವಿನಯ ಮೂಡಿ, ರಾಜಶೇಖರ ಮೂಡಿ, ವಿರೂಪಾಕ್ಷಪ್ಪ ಇದ್ದರು.
ಕಾರ್ಯಕ್ರಮದಲ್ಲಿ ಶಿವಾನಿ ಪ್ರಾರ್ಥಿಸಿ, ಮೂಡಿವಿಜಯ ಸ್ವಾಗತಿಸಿ, ಚಂದ್ರಶೇಖರ್ ನಿಜಗುಣ ನಿರೂಪಿಸಿದರು. ನಟರಾಜ್ ಉಪ್ಪಣ್ಣಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement