ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನುಡಿದಂತೆ ನಡೆವ ಸಿಎಂ ಸಿದ್ದರಾಮಯ್ಯ: ಖಾದರ್

Rashmi Kasaragodu
Updated On : 18 Mar 2014, 11:33 am

ತೀರ್ಥಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನುಡಿದಂತೆ ನಡೆಯುತ್ತಾರೆ. ನಡೆದಂತೆ ನುಡಿಯುತ್ತಾರೆ.  ಹಾಗಾಗಿ ಜನ ಅವರನ್ನೇ ಬೆಂಬಲಿಸುತ್ತಾರೆ ಎಂದು ಆರೋಗ್ಯ ಸಚಿವ ಎಚ್.ಟಿ. ಖಾದರ್ ಹೇಳಿದರು.   
ಸೋಮವಾರ ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಮಂಗನಕಾಯಿಲೆ (ಕೆಎಫ್‌ಡಿ) ರೋಗದಿಂದ ಜ್ವರಪೀಡಿತರಾಗಿ  ತೊಂದರೆಗೊಳಗಾಗಿರುವ ರೋಗಿಗಳನ್ನು ಭೇಟಿಮಾಡಿ ಕುಶಲೋಪರಿ ವಿಚಾರಿಸಿದ ಸಚಿವರು  ಶೀಘ್ರಗುಣಮುಖರಾಗಿ ಎಂದು ಹಾರೈಸಿದರು.
ಸಾವಿರ ಮೀರಿದ ಸಂಖ್ಯೆ: ತೀರ್ಥಹಳ್ಳಿ ತಾಲೂಕಿನ ಅಗ್ರಹಾರ, ಮಂಡಗದ್ದೆ ಹೋಬಳಿಯಲ್ಲಿ ಮಂಗನಕಾಯಿಲೆಯಿಂದ ಪೀಡಿತರಾಗಿರುವ ಗ್ರಾಮಸ್ಥರ ಸಂಖ್ಯೆ ಸಾವಿರ ಮೀರುತ್ತಿದೆ. ವ್ಯಾಪಕವಾಗಿ ಹಬ್ಬುತ್ತಿರುವ ಈ ರೋಗಕ್ಕೆ ಅಗತ್ಯ ಔಷಧ ದಾಸ್ತಾನು ಇವೆ. ಎಂದು ವೈದ್ಯಾಧಿಕಾರಿಗಳು ಸೂಕ್ತ ಮಾಹಿತಿ ನೀಡಿದರು. ಸದ್ಯಕ್ಕೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.
   ಮುಂದಿನ ದಿನಗಳಲ್ಲಿ  ಆಸ್ಪತ್ರೆಯ ಕುಂದುಕೊರತೆ ನಿವಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.   
ಆಸ್ಪತ್ರೆ ಭೇಟಿಯ ನಂತರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಪರವಾಗಿದ್ದಾರೆ.  ಪ್ರಮಾಣ ಸ್ವೀಕರಿಸಿದ ದಿನವೇ ಒಂದು ರೂ. ಕೆ.ಜಿ ಅಕ್ಕಿ ಘೋಷಿಸಿ, ಅನುಷ್ಠಾನಕ್ಕೂ ತಂದಿದ್ದಾರೆ ಎಂದರು.
ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.      ಕಾಂಗ್ರೆಸ್‌ಗೂ ಬಿಜೆಪಿಗೂ ಬಹಳ ವ್ಯತ್ಯಾಸವಿದೆ. ಕಾಂಗ್ರೆಸ್ ಬಡವರ ಪಕ್ಷ ಎಂದು ಹೇಳಿದರು.  
ತಾಲೂಕು ಕಾಂಗ್ರೆಸ್ ಮುಖಂಡ ಪಟಮಕ್ಕಿ ಮಹಾಬಲೇಶ್, ಡಾ.ಟಿ.ಎಲ್. ಸುಂದರೇಶ್, ಕೆಸ್ತೂರು ಮಂಜುನಾಥ್,  ಜಿಪಂ ಸದಸ್ಯ ಹಾರೊಗೊಳಿಗೆ ಪದ್ಮನಾಭ, ತಾಪಂ ಸದಸ್ಯ ಬಾಳೇಹಳ್ಳಿ ಪ್ರಭಾಕರ್, ಜೀನಾವಿಕ್ಟರ್ ಡಿಸೋಜ,  ಜಫ್ರುಲ್ಲಾ ಈ ಸಂದರ್ಭದಲ್ಲಿ ಹಾಜರಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement