ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಣ್ಣ ಎರಚಿ, ಮಡಕೆ ಒಡೆದು ಹೋಳಿ ಆಚರಣೆ

Rashmi Kasaragodu
Updated On : 18 Mar 2014, 11:39 am

ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಮಾ.17
ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಸೋಮವಾರ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಭಾನುವಾರ ಪಟ್ಟಣದಲ್ಲಿ ಸಂತೆ ದಿನವಾದ ಕಾರಣ ಸೋಮವಾರ ಆಚರಣೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ವಿವಿಧ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾಮಣ್ಣ ಪ್ರತಿಕೃತಿಗಳನ್ನು ಭಾನುವಾರ ತಡರಾತ್ರಿ ದಹನ ಮಾಡಲಾಗಿತ್ತು. ನಂತರ ಬೆಳಗ್ಗೆ 8 ಗಂಟೆಗೆ ಪ್ರತಿ ಕೇರಿಗಳಲ್ಲಿ ಚಿಕ್ಕಮಕ್ಕಳು ಪರಸ್ಪರ ಬಣ್ಣ ಎರಚುತ್ತಾ ಪ್ರಾರಂಭವಾದ ಹೋಳಿ ಹಬ್ಬ, 10 ಗಂಟೆ ವೇಳೆಗೆ ನಗರದ ನೂರಾರು ಯುವಕರು ಗುಂಪುಗುಂಪಲ್ಲಿ ಬಸ್ ಸ್ಟ್ಯಾಂಡ್ ವೃತ್ತದಿಂದ ಹಲಗೆ ಬಾರಿಸುತ್ತಾ ಕೇಕೇ ಹಾಕುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಮನೆಯಲ್ಲಿ ಇದ್ದವರನ್ನು ಹೊರಗೆ ಕರೆದು ಬಣ್ಣ ಎರಚಿ ಮೆರವಣಿಗೆಗೆ ಕರೆತಂದರು.
ಮಡಕೆ ಒಡೆದು ಸಂಭ್ರಮ:  ನಂತರ ಪುನಃ ಮೆರವಣಿಗೆಯಲ್ಲಿ ಆಗಮಿಸಿದ ಯುವಕರ ಗುಂಪು ಮುಖ್ಯ ವೃತ್ತದಲ್ಲಿ ಸೇರಿ ಎತ್ತರದಲ್ಲಿ ಕಟ್ಟಲಾಗಿದ್ದ ಮಡಕೆ ಒಡೆಯುವ ಸಾಹಸಕ್ಕೆ ಮುಂದಾದರು. ಬಸ್ ಸ್ಟ್ಯಾಂಡ್ಸ್ ವೃತ್ತದಲ್ಲಿ 20 ಅಡಿಯಷ್ಟು ಎತ್ತರದಲ್ಲಿ ಕಟ್ಟಲಾಗಿದ್ದ 3 ಮಡಕೆಗಳನ್ನು ಒಡೆಯಲು ಸಾಹಸ ಪಡುತ್ತಿರುವಾಗ ಬೇರೊಂದು ಯುವಕರ ಗುಂಪು ಅದನ್ನು ಬಣ್ಣ ಎರಚುವ ಮುಖಾಂತರ ವಿಫಲಯತ್ನ ನಡೆಸುವ ಆಟ ಗಂಟೆಗಟ್ಟಲೇ ನಡೆಯಿತು.
ಪಿರಮಿಡ್ ಆಕಾರದಲ್ಲಿ ಹತ್ತಿ ಒಡೆಯಲು ಮುಂದಾದ ಯುವಕರ ಗುಂಪು ಮಡಕೆ ಒಡೆಯಲು ಪ್ರಯತ್ನ ಪಡುವಾಗ ಹಲವಾರು ಯುವಕರು ಬಿದ್ದು ಸಣ್ಣ-ಪುಟ್ಟ ಗಾಯಗೊಂಡರು. ಯಾವುದೇ ತರಹದ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರ ವಹಿಸಿದರು.
ನೇತೃತ್ವ ವಹಿಸಿದ್ದ ಪ.ಪಂ. ಮಾಜಿ ಅಧ್ಯಕ್ಷರಾದ ಟಿ.ರಾಜು ಮತ್ತು ಎಚ್.ಎಂ. ಚಂದ್ರಶೇಖರ ಕಾರ್ಯಕ್ರಮ ಯಶಸ್ವಿಯಾಗಲು ಯುವಕರರೊಂದಿಗಿದ್ದು, ಅಹಿತಕರ ಘಟನೆ ಆಗದಂತೆ ಎಚ್ಚರ ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement