20ರಂದು ಬಳ್ಳಿಗಾವಿಯಲ್ಲಿ ರಥೋತ್ಸವ
ಶಿರಾಳಕೊಪ್ಪ: ದಕ್ಷಿಣ ಕೇದಾರ ಎಂದು ಪ್ರಸಿದ್ದಿ ಪಡೆದಿರುವ ಐತಿಹಾಸಿಕ ಕ್ಷೇತ್ರ ಬಳ್ಳಿಗಾವಿ ಕೇದಾರೇಶ್ವರ ರಥೋತ್ಸವ ಮಾ.20ರಂದು ನಡೆಯಲಿದೆ. ದಿ.19ರಂದು ಪುಷ್ಪ ರಥೋತ್ಸವ (ಸಣ್ಣತೇರು)ದಿ.20ರಂದು ದೊಡ್ಡ ರಥೋತ್ಸವ ಪ್ರತಿವರ್ಷದಂತೆ ದಿ.20ರಂದು ಬೆಳಗ್ಗೆ 9-30ಕ್ಕೆ ಪ್ರಾರಂಭವಾಗಲಿದೆ. ನಂತರ ರಥವು ಗ್ರಾಮದಲ್ಲಿ ತೆರಳಿ ಪುನಃ ಮಧ್ಯಾಹ್ನ 12ಗಂಟೆ ವೇಳೆಗೆ ದೇವಸ್ಥಾನಕ್ಕೆ ತಿರುಗಿ ಬರಲಿದೆ. ಮಾ.21ರಂದು ಓಕಳಿಯೊಂದಿಗೆ ಕಾರ್ಯಕ್ರಮ ಮುಕ್ತಾಯ ವಾಗುತ್ತದೆ ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ. ಹೊಯ್ಸಳ ದೊರೆ ವಿಷ್ಣುವರ್ದನನ ಪತ್ನಿ ನಾಟ್ಯರಾಣಿ ಶಾಕುಂತಲೆ ಇದೇ ಗ್ರಾಮದಲ್ಲಿ ಹುಟ್ಟಿ ತನ್ನ ನಾಟ್ಯವನ್ನು ಕಲಿತು ನಾಟ್ಯರಾಣಿ ಎಂದು ಹೆಸರು ಪಡೆದ ಇತಿಹಾಸವಿದೆ. ಹಾಗೆಯೇ ಶರಣರಲ್ಲಿ ಅಗ್ರಗಣ್ಯರಾದ ಅಲ್ಲಮಪ್ರಭು ದೇವರು ಸುಕ್ಷೇತ್ರ ಇದಾಗಿದ್ದು, ಅಕ್ಕಮಹಾದೇವಿ ಯಂತಹ ಶರಣೆಯರು ಇದ್ದಂತಹನಾಡು.