ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅನಧಿಕೃತವಾಗಿ ಕರ ವಸೂಲಿ: ಆರೋಪ

Rashmi Kasaragodu
Updated On : 19 Mar 2014, 11:55 am

ಸೊರಬ: ಇತ್ತೀಚೆಗೆ ಚಂದ್ರಗುತ್ತಿ ಶ್ರೀ ರೇಣುಕಾದೇವಿಯ ರಥೋತ್ಸವ ನಡೆದಿದ್ದು, ಅದರ ನಿಮಿತ್ತ ಅನೇಕ ಅಂಗಡಿ ಮುಂಗಟ್ಟುಗಳು ಸೇರಿದ್ದವು. ಅಂಗಡಿ ಮಾಲೀಕರಿಂದ ಮುಜರಾಯಿ ಇಲಾಖೆ ಕರ ವಸೂಲಿ ಮಾಡಿದೆ. ಇದಲ್ಲದೇ ಕೆಲವರು ಅನಧಿಕೃತವಾಗಿ ಮುಜರಾಯಿ ಇಲಾಖೆ ಹೆಸರಿನಿಂದ ಅಂಗಡಿಯವರಿಂದ ಹಣ ವಸೂಲಿ ಮಾಡಿರುವುದು ತಿಳಿದು ಬಂದಿದೆ.
ಅಂಗಡಿಗಳ ಹರಾಜು ಅನಧಿಕೃತವಾಗಿ ನಡೆದಿರುವ ಬಗ್ಗೆಯೂ ದೂರು ಕೇಳಿ ಬಂದಿದೆ. ಕೂಡಲೆ ಈ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ. ಒಂದು ವೇಳೆ ಸ್ಪಂದಿಸದೇ ಹೋದಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಚಂದ್ರಗುತ್ತಿಯ ಗ್ರಾಪಂ ಸದಸ್ಯ ರತ್ನಾಕರ ಎಂ.ಪಿ., ವೈ.ಆರ್.ದೇಸಾಯಿ, ಎಪಿಎಂಸಿ ಮಾಜಿ ಸದಸ್ಯ ಸಣ್ಣಪ್ಪ, ಮುಖಂಡರಾದ ಜಿ.ಬಿಳಿಯಪ್ಪ, ಗುತ್ಯಪ್ಪ, ಎಂ.ಜಿ.ಸ್ವಾಧಿ, ಶಿವಪ್ಪ ಮಾಸ್ತರ್, ಅಂಚೆ ಬಂಗಾರಪ್ಪ, ಟಿ.ಪರಶುರಾಮಪ್ಪ, ಎಚ್.ರಾಮಪ್ಪ, ಪರಶುರಾಮಪ್ಪ, ಸುರೇಂದ್ರ ನಾಯ್ಕ್, ಚಂದ್ರಕಾಂತ ಜೆ.ನಾಯಕ್,ನಾಗರಾಜ್, ಎಂ.ಗಿರೀಶ್ಹಾಗೂ ಇನ್ನೂ ಅನೇಕ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement