ಸುಬೋಧ್ಕುಮಾರ್ ನಿಧನ
ಶಿವಮೊಗ್ಗ: ದುರ್ಗಿಗುಡಿಯ ಸುಬೋಧ್ಕುಮಾರ್ (71) ಮಂಗಳವಾರ ನಿಧನರಾದರು. ಮಂಗಳೂರಿನವರಾಗಿದ್ದ ಸುಬೋಧ್ ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಇವರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. 1970ರಲ್ಲಿ ಶಿವಮೊಗ್ಗಕ್ಕೆ ಬಂದ ಅವರು ಸರ್ವೆಯರ್, ಲಾಸ್ ಎಸೆಸರ್ ಆಗಿ ನಗರದಲ್ಲಿ ಹೆಸರಾಗಿದ್ದರು. ರೋಟರಿ ಕ್ಲಬ್, ಬಿಲ್ಲವ ಸಂಘಗಳಲ್ಲಿ ಕಾರ್ಯನಿರ್ವಹಿಸಿದ್ದರು. ರೋಟರಿ ಕ್ಲಬ್, ಬಿಲ್ಲವ ಸಂಘ, ಸಿರಿಗನ್ನಡ ಪುಸ್ತಕ ಮನೆ ಸಂಘಟನೆಗಳವರು ಸಂತಾಪ ಸೂಚಿಸಿದ್ದಾರೆ.