ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹೊಂಬುಜದಲ್ಲಿ ಪುಷ್ಪರಥ ಲೋಕಾರ್ಪಣೆ

Rashmi Kasaragodu
Updated On : 19 Mar 2014, 11:57 am

ಹೊಸನಗರ:  ತಾಲೂಕಿನ ಇತಿಹಾಸ ಪ್ರಸಿದ್ಧ ಹೊಂಬುಜ ಜೈನಮಠದಲ್ಲಿ ನೂತನವಾಗಿ ನಿರ್ಮಿಸಲಾದ ಭವ್ಯ ಪುಷ್ಪರಥವನ್ನು ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಶ್ರೀ ಸಾನ್ನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ನಾಗವಾಹನ, ಸಿಂಹವಾಹನ, ಗಜಾ ವಾಹನದ ಲೋಕಾರ್ಪಣೆ ಕೂಡ ಸಾಂಗವಾಗಿ ನೆರವೇರಿತು.
ಸಾನ್ನಿಧ್ಯವಹಿಸಿ ಆರ್ಶೀವಚನ ನೀಡಿದ ದೇವೇಂದ್ರಕೀರ್ತಿ ಸ್ವಾಮೀಜಿ, ಸಮವಸರಣ ವಿಹಾರದ ಸಾಂಕೇತಿಕವಾಗಿರುವ ರಥ ಹಾಗೂ ಸಾಂದರ್ಭಿಕ ನಾಗ, ಗಜ, ಸಿಂಹವಾಹನ ಮಹತ್ವದ ಬಗ್ಗೆ ಭಕ್ತರಿಗೆ ಮಾಹಿತಿ ನೀಡಿದರು.
ರು. 40 ಲಕ್ಷ ವೆಚ್ಚದಲ್ಲಿ ಪುಷ್ಪರಥ: ಈ ರಥವು ಪೂರ್ಣವಾಗಿ ಸಾಗವಾನಿ, ಹಲಸು, ಹೊನ್ನೆ, ಬೋಗಿ ಮರಗಳಿಂದ ರೂಪುಗೊಂಡ ಪುಷ್ಪರಥ ರು. 40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ವಿಶೇಷವಾಗಿ ಶ್ರೀಕ್ಷೇತ್ರವನ್ನು ಬಿಂಬಿಸುವ ಕಲಾಕೆತ್ತನೆ ಕುಸುರಿಗಳಿಂದ ಕೂಡಿ ಆಕರ್ಷಕ  ವಿನ್ಯಾಸ ಹೊಂದಿದ್ದು, ಗಮನ ಸಳೆಯುವಂತಿದೆ. ಲೋಕಾರ್ಪಣಾ ವಿಧಿ, ವಿಧಾನಗಳನ್ನು ಪದ್ಮರಾಜ್ ಇಂದ್ರ ಮತ್ತು ಪುರೋಹಿತ ಬಳಗದವರು ವಿಧ್ಯುಕ್ತವಾಗಿ ನಡೆಸಿದರು.
ಈ ಸಂದರ್ಭದಲ್ಲಿ ಜೈನ ಮಠದ ಆಡಳಿತಾಧಿಕಾರಿ ಜೆ.ಜೆ. ಪದ್ಮನಾಭಯ್ಯ, ಜಿ. ಮಂಜಪ್ಪ, ರಥದ ಶಿಲ್ಪಿಗಳಾದ ಸಾಣೂರಿನ ಪದ್ಮನಾಭ ಆಚಾರಿ ಮತ್ತು ಸಂಗಡಿಗರು ಹಾಗೂ ಧರ್ಮ ಬಾಂಧವರು ಪಾಲ್ಗೊಂಡಿದ್ದರು.
24ರಂದು ಮಹಾರಥೋತ್ಸವ: ಹೊಂಬುಜದಲ್ಲಿ ಪರಂಪರೆಯಂತೆ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಮಾ.21ರಿಂದ 25ರವರೆಗೆ ನಡೆಯಲಿದ್ದು, 24ರಂದು ಸೋಮವಾರ ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿಯವರ ಮಹಾರಥೋತ್ಸವ ನಡೆಯಲಿದೆ ಎಂದು ಹೊಂಬುಜಮಠದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement