ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅದ್ವೈತ ಸದಾಶಿವ ಸಂಕೀರ್ತನ, ವ್ಯಾಖ್ಯಾನ

Rashmi Kasaragodu
Updated On : 20 Mar 2014, 12:04 pm

ಶಿವಮೊಗ್ಗ: ದೆಹಲಿಯ ಭಾರತೀಯ ಸಾಂಸ್ಕೃತಿಕ ನಿರ್ದೇಶನಾಲಯದ ಸಹಕಾರದಲ್ಲಿ ಶಿವಮೊಗ್ಗದ ಶ್ರೀಗುರುಗುಹ ವಾಗ್ಗೇಯ ಪ್ರತಿಷ್ಠಾನವು ಶ್ರೀಅದ್ವೈತ ಸದಾಶಿವ ಎಂಬ ಕಾರ್ಯಕ್ರಮವನ್ನು ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಂಡಿತ್ತು.
ಮನೋವೈದ್ಯ ಕೆ.ಆರ್. ಶ್ರೀಧರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಆಧ್ಯಾತ್ಮಿಕ ಚಿಂತಕ ಡಾ. ಕೂಡಲಿ ಜಗನ್ನಾಥಶಾಸ್ತ್ರಿ ಉದ್ಘಾಟಿಸಿ ಮಾರ್ಗದರ್ಶನ ಮಾಡಿದರು. ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿದ್ವಾನ್ ಶೃಂಗೇರಿ ನಾಗರಾಜ್ ಉಪಸ್ಥಿತರಿದ್ದು, ಕಾರ್ಯಕ್ರಮದ ಮಹತ್ವ ತಿಳಿಸಿದರು.
ಮಹಾಜ್ಞಾನಿಯಾಗಿದ್ದರು:  17ನೇ ಶತಮಾನದಲ್ಲಿ ತಮಿಳುನಾಡಿನಲ್ಲಿ ಇದ್ದಂತಹ ಮಹಾ ಅದ್ವೈತ ಅನುಭಾವಿ, ಅವಧೂತ. ಸಣ್ಣ ವಯಸ್ಸಿನಲ್ಲಿಯೇ ಮಹಾಜ್ಞಾನಿ ಆಗಿದ್ದವರು. ಸದಾಶಿವ ಬ್ರಹ್ಮೇಂದ್ರರು ವೇದೋಪನಿಷತ್ ಜ್ಞಾನಗಳ ಜೊತೆಯಲ್ಲಿ ಹಲವು ಆಧ್ಯಾತ್ಮ ಗ್ರಂಥಗಳ ರಚನೆಗಳ ನಡುವೆ, ಭಕ್ತಿಯ ಪರಾಕಾಷ್ಠೆಯ ಅನುಭವ ನೀಡುವ ಹಲವು ಸಂಸ್ಕೃತ ಗೀತೆಗಳನ್ನು ರಚನೆ ಮಾಡಿರುವ ಮೌನ ದೀಕ್ಷೆಯ ದಿಗಂಬರ ಯೋಗಿ ಎಂದು ವಿ.ಶೃಂಗೇರಿ ನಾಗರಾಜ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement