'ಶ್ರೀರಾಮುಲು ಸೇರ್ಪಡೆಗೆ ಗೊಂದಲವಿಲ್ಲ'
ಶಿವಮೊಗ್ಗ: ಶ್ರೀರಾಮುಲು, ಯಡಿಯೂರಪ್ಪ, ನರೇಂದ್ರ ಮೋದಿ ಈ ಮೂರು ಅಲೆಗಳ ಸಂಗಮದಿಂದ ಬಿಜೆಪಿ ಬಲಿಷ್ಠವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮುಲು ಬಿಜೆಪಿ ಸೇರ್ಪಡೆ ಕುರಿತಂತೆ ಯಾವುದೇ ಗೊಂದಲ ಇಲ್ಲ. ದೆಹಲಿಯಲ್ಲಿ ಸುಷ್ಮಾ ಸ್ವರಾಜ್ ನೇತೃತ್ವದಲ್ಲೇ ಸಭೆ ನಡೆದಾಗ ಸಹಮತ ವ್ಯಕ್ತವಾಗಿದೆ. ಗೊಂದಲವಿಲ್ಲ ಎಂದು ಬಿಜೆಪಿ ರಾಜ್ಯ ಸಮಿತಿಯು ಕೇಂದ್ರ ಸಮಿತಿಗೆ ವರದಿಯನ್ನೂ ನೀಡಿದೆ. ಸದ್ಯದಲ್ಲಿಯೇ ಶ್ರೀರಾಮುಲು ಅವರಿಗೆ ಟಿಕೆಟ್ ಘೋಷಣೆ ಆಗುವ ಆಶಾಭಾವನೆ ಇದೆ ಎಂದರು. ಜೆಡಿಎಸ್ ಅಭ್ಯರ್ಥಿ ಬಗ್ಗೆ ಪ್ರಸ್ತಾಪಿಸಿದ ಅವರು, ಶಿವಮೊಗ್ಗ ಹೋರಾಟದ ನೆಲ. ಸಿನಿಮಾ ನಟರು ಬಂದರೆ ಇಲ್ಲಿಯ ಜನರು ಮರುಳಾಗುವುದಿಲ್ಲ ಎಂದರು.