ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಲಗಾರ ಪತ್ನಿಯಿಂದಲೇ ಸಾಲ ಪಡೆದ ಭಂಡಾರಿ

Rashmi Kasaragodu
Updated On : 20 Mar 2014, 12:02 pm

ಶಿವಮೊಗ್ಗ: ಮೇಲ್ನೋಟಕ್ಕೆ ಎಷ್ಟೆಲ್ಲಾ ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು ಸುಮಾರು ಎಂಟುವರೆ ಕೋಟಿ ರು. ಸಾಲಗಾರ. ವಿವಿಧ ಬ್ಯಾಂಕುಗಳು ಹಾಗೂ ವೈಯಕ್ತಿಕವಾಗಿ ಪಡೆದ ಸಾಲವಿದ ಮೊತ್ತವೇ ಇಷ್ಟು. ಅವರು ಸ್ವತಃ ಅವರ ಪತ್ನಿ ಪ್ರಸನ್ನ ಭಂಡಾರಿ ಅವರಿಂದಲೂ ಸುಮಾರು 24.5 ಲಕ್ಷ ಸಾಲ ಪಡೆದಿದ್ದಾರೆ.
  ವಿಚಿತ್ರವೆಂದರೆ ಈಗಾಗಲೇ ಅವರ ಪತ್ನಿಯ ಮೇಲೆ ವಿವಿಧೆಡೆಯಿಂದ ಪಡೆದ 43,27,964 ಸಾಲದ ಹೊರೆ ಇದೆ. ಆದರೂ ಪತಿಗೆ ಸಾಲ ನೀಡಿ ಅಚ್ಚರಿ ಮೂಡಿಸಿದ್ದಾರೆ. ಆದರೂ ಭಂಡಾರಿ ಅವರು ಪತ್ನಿ ಪ್ರಸನ್ನ ಭಂಡಾರಿ ಅವರಿಗಿಂತ ಹೆಚ್ಚು ಶ್ರೀಮಂತ. ಉದ್ಯಮಿಯೂ ಆಗಿರುವ ಮಂಜುನಾಥ ಭಂಡಾರಿ ಅವರು ಹಲವು ಕಂಪನಿಗಳ ಷೇರು, ವಿವಿಧ ಬ್ಯಾಂಕುಗಳಲ್ಲಿ ಖಾತೆ, ಠೇವಣಿ ಹೊಂದಿದ್ದಾರೆ. ಶಿವಮೊಗ್ಗದ ಗ್ಯಾಸ್ ಏಜೆನ್ಸಿ ಸೇರಿದಂತೆ ಹಲವು ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ.
ದಾಸರಕಲ್ಲಹಳ್ಳಿಯಲ್ಲಿ 3.24 ಎಕರೆ, ಅಗಸನಹಳ್ಳಿಯಲ್ಲಿ ಸುಮಾರು 7 ಎಕರೆ ಕೃಷಿ ಭೂಮಿ ಇದ್ದರೆ, ಅವರ ಪತ್ನಿ ಬಂಟ್ವಾಳದಲ್ಲಿ 4 ಎಕರೆ ಕೃಷಿ ಭೂಮಿ ಹೊಂದಿದ್ದಾರೆ.
ಶಿವಮೊಗ್ಗದ ನವುಲೆ, ಗಾಂಧಿನಗರದಲ್ಲಿ ನಿವೇಶನ, ಕಟ್ಟಡಗಳನ್ನು ಭಂಡಾರಿ ಹೊಂದಿದ್ದರೆ, ಅವರ ಪತ್ನಿ ಮಂಗಳೂರಿನ ಕದ್ರಿ, ಬೆಂಗಳೂರಿನ ಬೊಕ್ಕಸಾಗರದಲ್ಲಿ ನಿವೇಶನ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement