ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸ್ವಯಂ ಉದ್ಯೋಗದಿಂದ ನಿರುದ್ಯೋಗ ನಿವಾರಣೆ'

Rashmi Kasaragodu
Updated On : 20 Mar 2014, 12:03 pm

ಶಿವಮೊಗ್ಗ: ಎಲ್ಲಾ ಉದ್ಯೋಗಗಳಿಗಿಂತ ಸ್ವಯಂ ಉದ್ಯೋಗ ಅತ್ಯಂತ ಶ್ರೇಷ್ಠ, ನಿರುದ್ಯೋಗಿಗಳು ಸ್ವಂತ ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕು ಎಂದು ಸಮಾಜ ಸೇವಕಿ ಶೋಭಾ ದೇವರಾಜ್ ಹೇಳಿದರು.
ಇಲ್ಲಿನ ಹರಿಗೆಯ ಸಮುದಾಯ ಭವನದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಿಳಾ ಉದ್ಯಮಶೀಲತಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಾಕಷ್ಟು ವಿದ್ಯಾವಂತ ನಿರುದ್ಯೋಗಿಗಳು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿ ಕೆಲಸಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಾ ತಮ್ಮ ಅಮೂಲ್ಯ ವಯಸ್ಸು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಸ್ವಯಂ ಉದ್ಯೋಗದಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ ಎಂದರು. ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಮಾತನಾಡಿದರು. ಶ್ರೀಮಲ್ಲೇಶ್ವರ ಭಜನಾ ಯುವತಿ ಮಂಡಳಿ ಅಧ್ಯಕ್ಷೆ ಶೋಭಾ, ವಾಲ್ಮೀಕಿ ಯುವತಿ ಮಂಡಳಿ ಉಪಾಧ್ಯಕ್ಷೆ ಗಂಗಾ, ಸದಸ್ಯರಾದ ಪದ್ಮಾ, ಜಯಮ್ಮ, ಆಶಾ, ವೀಣಾ, ಸಾವಿತ್ರಿ, ನೇತ್ರಾ, ಗೀತಾ, ಮಂಜಮ್ಮ, ಭಾಗ್ಯಮ್ಮ, ಜ್ಯೋತಿ ಉಸ್ಥಿತರಿದ್ದರು.
ಜ್ಯೋತಿ ಸ್ವರೂಪ ಪತಂಜಲಿ ನಿರಂತರ ಉಳಿತಾಯ ಸ್ವಸಹಾಯ ಸಂಘದ ಅಧ್ಯಕ್ಷೆ ವಾಣಿಶ್ರೀ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನವ್ಯಶ್ರೀ ಪ್ರಾರ್ಥಿಸಿ, ಮಂಜುಳ ಸ್ವಾಗತಿಸಿ, ಪದ್ಮಾವತಿ ನಿರೂಪಿಸಿ, ಕಾರ್ಯದರ್ಶಿ ರಂಜಿತಾ ವಂದಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement