ಈಜಲು ಹೋಗಿದ್ದ ಯುವಕ ಸಾವು
ಭದ್ರಾವತಿ: ಕಣಕಟ್ಟೆ ವಾಸಿ ಶಿವರಾಜ (23) ಎಂಬವರು ಭದ್ರಾ ಬಲದಂಡೆ ನಾಲೆಯಲ್ಲಿ ಬುಧವಾರ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ. ಈತನ ಮೃತದೇಹ ಉಕ್ಕುಂದ ಗ್ರಾಮದ ಬಳಿ ನಾಲೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಭದ್ರಾವತಿ ಗ್ರಾಮಾಂತರ ಪೊಲೀಸರು ಆಕಸ್ಮಿಕ ಮರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೂಜಾಟ: ಪಟ್ಟಣದ ಜನ್ನಾಪುರದ ರಾಜಪ್ಪ ಲೇಔಟ್ನ ಲಕ್ಷ್ಮಿ ನಿಲಯದ ಮೇಲೆ ಅಂದರ್ ಬಾಹರ್ ಇಸ್ಪೀಟ್ ಜೂಜಾಡುತ್ತಿದ್ದ ಅಡ್ಡೆ ಮೇಲೆ ನ್ಯೂಟೌನ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ಸಂದೀಪ್ ಮತ್ತವರ ಸಿಬ್ಬಂದಿ ದಾಳಿ ನಡೆಸಿ ಹಲವರನ್ನು ಬಂಧಿಸಿದರು. ಬಂಧಿತರಿಂದ 15250 ನಗದು, 9 ಮೊಬೈಲ್ ಫೋನ್, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೈಕ್ ಕಳವು: ದೂರು: ನ್ಯೂಟೌನ್ ಸರ್ಕಾರಿ ಪಾಲಿಟೆಕ್ನಿಕ್ ಬಳಿ ನಿಲ್ಲಿಸಿದ್ದ ಕೆಎ.14. ಆರ್.4290 ನೋಂದಣಿ ಸಂಖ್ಯೆಯ ಸ್ಪೆಂಡರ್ ಬೈಕ್ ಬುಧವಾರ ಕಳವಾಗಿರುವ ಬಗ್ಗೆ ಮಾಲೀಕ ಕೃಷ್ಣಮೂರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.